ಧಾರವಾಡ: ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಶಂಕರ ಕಂಬಾರ, ಬಸವರಾಜ ಗೂಳಪ್ಪ ಕಮ್ಮಾರ, ಬಸವರಾಜ ವಿರೂಪಾಕ್ಷಪ್ಪ ಕಮ್ಮಾರ, ಕರಿಯಪ್ಪ ಕಮ್ಮಾರ ಅವರು ಮನೆ ಮತ್ತು ಇತರೆಡೆ ದಾಸ್ತಾನು ಮಾಡಿದ್ದ 91 ಪಿಒಪಿ ಗಣೇಶ ಮೂರ್ತಿಗಳನ್ನು ಅಧಿಕಾರಿಗಳು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.
ಜಿಲ್ಲಾ ಪರಿಸರ ಅಧಿಕಾರಿ ಜಗದೀಶ ಐ.ಎಚ್ ಹಾಗೂ ಇಒ ಗಂಗಾಧರ್ ಕಂದಕೂರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಅಮ್ಮಿನಭಾವಿ ವಲಯದ ಕಂದಾಯ ನಿರೀಕ್ಷಕ ಸಂಪತಕುಮಾರ ಒಡೆಯರ್, ಗ್ರಾಮ ಆಡಳಿತ ಅಧಿಕಾರಿ ರಾಮಚಂದ್ರ ನಾಯಕ್, ಪಿಡಿಒ ಬಸವರಾಜ ಮದನಬಾವಿ, ಕಾರ್ಯದರ್ಶಿ ಜಿ.ಎಸ್ ಬಡಿಗೇರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.