ADVERTISEMENT

ಹುಬ್ಬಳ್ಳಿ: ನ.22ರಂದು ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2023, 14:22 IST
Last Updated 20 ನವೆಂಬರ್ 2023, 14:22 IST

ಹುಬ್ಬಳ್ಳಿ: ಹೆಸ್ಕಾಂನ 110 ಕೆ.ವಿ ರಾಮನಕೊಪ್ಪ ವಿದ್ಯುತ್ ಉಪ ಕೇಂದ್ರದಲ್ಲಿ 2ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೊಳ್ಳುವುದರಿಂದ ನ.22ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ 110 ಕೆ.ವಿ ಮಾರ್ಗದ ಇಂಡಸ್ಟ್ರಿಯಲ್, ಛಬ್ಬಿ, ಪಾಲಿಕೊಪ್ಪ, ಅರಳಿಕಟ್ಟೆ, ದ್ಯಾಮಾಪುರ, ವರೂರ, ಮುತ್ತಳ್ಳಿ, ತಡಸ, ಇನಾಮ ವೀರಾಪೂರ, ಮಳಲಿ, ರಾಮನಕೊಪ್ಪ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಹೆಸ್ಕಾಂನ 110 ಕೆ.ವಿ ಅಣ್ಣಿಗೇರಿ ವಿದ್ಯುತ್ ಕೇಂದ್ರದಲ್ಲಿ 3ನೇ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಕೈಗೊಳ್ಳುವುದರಿಂದ ನ.22ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರ ವರೆಗೆ 11 ಕೆ.ವಿ ಮಾರ್ಗದ ನಲವಡಿ, ಬದ್ರಾಪುರ, ಕೋಳಿವಾಡ, ಅಣ್ಣಿಗೇರಿ, ಹಳ್ಳಿಕೇರಿ, ಮಜ್ಜಿಗುಡ್ಡ, ಕೊಂಡಿಕೊಪ್ಪ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT