ADVERTISEMENT

ಕುಂದಗೋಳ: ಬಾಗಿದ ವಿದ್ಯುತ್ ಕಂಬಗಳು, ಜೋತುಬಿದ್ದ ತಂತಿಗಳು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2023, 14:36 IST
Last Updated 13 ಡಿಸೆಂಬರ್ 2023, 14:36 IST
ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದ ಮಹಿಳೆ ನಿಂಗವ್ವ ಅವರ ಮನೆಯ ಹತ್ತಿರ ಹಾದು ಹೋಗಿರುವ ವಿದ್ಯುತ್ ತಂತಿಗಳು
ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದ ಮಹಿಳೆ ನಿಂಗವ್ವ ಅವರ ಮನೆಯ ಹತ್ತಿರ ಹಾದು ಹೋಗಿರುವ ವಿದ್ಯುತ್ ತಂತಿಗಳು   

ಕುಂದಗೋಳ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದಿಂದ ಕುಂದಗೋಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬಗಳು ಬೀಳುವ ಹಂತದಲ್ಲಿವೆ.

ಈ ಮಾರ್ಗದಲ್ಲಿ ನವಲಗುಂದ, ಗದಗಕ್ಕೆ ಹೋಗುವ ಬಸ್ಸುಗಳು ಸಂಚರಿಸುತ್ತವೆ. ರೈತರು ಟ್ರ್ಯಾಕ್ಟರ್ ಮೂಲಕ ವಿವಿಧ ಬೆಳೆಗಳನ್ನು ಸಾಗಿಸುವಾಗ ಜೋತು ಬಿದ್ದಿರುವ ತಂತಿಗಳು ಅಪಾಯ ತಂದೊಡ್ದುವ ರೀತಿಯಲ್ಲಿ ಬಾಗಿವೆ.

ಮನೆಯ ಪಕ್ಕದ ವಿದ್ಯುತ್ ಕಂಬಕ್ಕೆ ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಯಾವುದೇ ಸಮಯದಲ್ಲಿ ಅಪಾಯ ತರಬಹುದು. ಸಮಸ್ಯೆಯನ್ನು ಹಲವು ಬಾರಿ ಹೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ, ಆದರೂ ಪ್ರಯೋಜನವಾಗಿಲ್ಲ.

ADVERTISEMENT
ಕುಂದಗೋಳ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ವಾಲಿರುವ ವಿದ್ಯುತ್ ಕಂಬಗಳು

ಗ್ರಾಮದಲ್ಲಿ ಅಲ್ಲಲ್ಲಿ ವಿದ್ಯುತ್ ಕಂಬಗಳು ಬಹುತೇಕ ಬೀಳುವ ಹಂತದಲ್ಲಿವೆ. ಕಂಬಗಳು ಮುರಿಯುವ ಸ್ಥಿತಿ ತಲುಪಿ, ಕಬ್ಬಿಣದ ಸರಳು ಕಾಣುತ್ತಿವೆ. ಇದರಿಂದ ಮಕ್ಕಳು, ದನ-ಕರುಗಳಿಗೆ ಅಪಾಯವಾಗುವ ಸಾಧ್ಯತೆ ಇದ್ದು, ಆದಷ್ಟು ಬೇಗ ಅಧಿಕಾರಿಗಳು ಸಮಸ್ಯೆ ಬಗೆಹರಿಸಿ ಹೊಸ ವಿದ್ಯುತ್ ಕಂಬಗಳನ್ನು ಹಾಕಬೇಕು.

ಬಸವರಾಜ ಯೋಗಪ್ಪನವರ, ನಿಂಗವ್ವ, ಗುಡೇನಕಟ್ಟಿ ಗ್ರಾಮಸ್ಥರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.