ADVERTISEMENT

ನಿತ್ಯ ಭಗವಂತನ ದರ್ಶನ ಮಾಡಿ: ಪುಣ್ಯಸಾಗರ ಮುನಿ ಮಹಾರಾಜ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:51 IST
Last Updated 12 ಫೆಬ್ರುವರಿ 2026, 6:51 IST
ಗುಡಗೇರಿ ಗ್ರಾಮದಿಂದ ಹರಲಾಪೂರ ಗ್ರಾಮಕ್ಕೆ 108 ಶ್ರೀ ಪುಣ್ಯಸಾಗರ ಮುನಿ ಮಹಾರಾಜರು ವಿಹಾರ ನಡೆಸಿದರು
ಗುಡಗೇರಿ ಗ್ರಾಮದಿಂದ ಹರಲಾಪೂರ ಗ್ರಾಮಕ್ಕೆ 108 ಶ್ರೀ ಪುಣ್ಯಸಾಗರ ಮುನಿ ಮಹಾರಾಜರು ವಿಹಾರ ನಡೆಸಿದರು   

ಗುಡಗೇರಿ: ಶ್ರಾವಕರು ನಿತ್ಯವು ಭಗವಂತನ ದರ್ಶನ, ಶಾಸ್ತ್ರಗಳ ಅಧ್ಯಯನ ಮಾಡುವಂತರಾಗಬೇಕು ಎಂದು 108 ಶ್ರೀ ಪುಣ್ಯಸಾಗರ ಮುನಿ ಮಹಾರಾಜ ಹೇಳಿದರು.

ಅವರು ಗ್ರಾಮದಲ್ಲಿ ಹಮ್ಮಿಕೊಂಡ 1008 ಶ್ರೀ ಶಾಂತಿನಾಥ ತೀರ್ಥಂಕರರ ಪಂಚ ಕಲ್ಯಾಣ ಮಹೋತ್ಸವ ಕಾರ್ಯಕ್ರಮ ಸಂಪನ್ನಗೊಳಿಸಿ ಬುಧವಾರ ಹರ್ಲಾಪುರ ಗ್ರಾಮಕ್ಕೆ ವಿಹಾರ ಮುನ್ನ ಶಾಂತಿನಾಥ ತೀರ್ಥಂಕರ ಬಸದಿಯಲ್ಲಿ ಶ್ರಾವಕರಿಗೆ ಆಶೀರ್ವಚನ ನೀಡಿದರು.

ಮಕ್ಕಳಿಗೆ ಲೌಕಿಕ ಶಿಕ್ಷಣ ಜೊತೆಗೆ ಧರ್ಮದ ಸಂಸ್ಕಾರವು ಅವಶ್ಯವಾಗಿದ್ದು, ನಿತ್ಯವು ಮಕ್ಕಳನ್ನು ಬಸೀದಿಗೆ ಕರೆದೊಂದು ದೇವ, ಗುರು, ಶಾಸ್ತ್ರಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು. ವಿಹಾರದಲ್ಲಿ ಗ್ರಾಮದ ಜೈನ ಸಮಾಜದ ಶ್ರಾವಕ,  ಶ್ರಾವಕಿಯರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.