ADVERTISEMENT

ಧಾರವಾಡ | ಮರಳಿನಲ್ಲಿ ರಾಮಮಂದಿರ ರಚನೆ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2020, 6:43 IST
Last Updated 4 ಆಗಸ್ಟ್ 2020, 6:43 IST
   

ಧಾರವಾಡ: ಅಯೋಧ್ಯೆಯಲ್ಲಿ ಬುಧವಾರ ನೆರವೇರಲಿರುವ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಹಿನ್ನೆಲೆಯಲ್ಲಿ ಶಿಲ್ಪ ಕಲಾವಿದ ಮಂಜುನಾಥ ಹಿರೇಮಠ ಅವರು ಮಂದಿರದ ಪ್ರತಿಕೃತಿಯನ್ನು ಮರಳಿನಲ್ಲಿ ರಚಿಸಿ ಗಮನ ಸೆಳೆದರು.

ಇಲ್ಲಿನ ದೊಡ್ಡನಾಯಕನಕೊಪ್ಪ ಬಳಿಯ ಬಸ್ ನಿಲ್ದಾಣದ ಹತ್ತಿರ ಡಬ್ಬಲ್ ರಸ್ತೆಯಲ್ಲಿ ಜನಜಾಗೃತಿ ಸಂಘ ಹಾಗೂ ಡಿ.ಎನ್.ಕೊಪ್ಪ ಬಡಾವಣೆ ನಿವಾಸಿಗಳ ಸಹಕಾರದೊಂದಿಗೆ ಜರುಗಿದ ಮರಳಿನ ಶಿಲ್ಪ ರಚನೆ ಕಾರ್ಯಕ್ರಮದಲ್ಲಿ ಬಡಾವಣೆಯ ಜನರು, ಕಲಾಸಕ್ತರು ಪಾಲ್ಗೊಂಡಿದ್ದರು.

ಸುಮಾರು 20 ಟನ್ ಮರಳಿನ ದಿಬ್ಬದಲ್ಲಿ 6 ಅಡಿ ಎತ್ತರ ಹಾಗೂ 10 ಅಡಿ ಅಗಲದ ಮಂದಿರದ ಪ್ರತಿಕೃತಿಯನ್ನು ರಚಿಸಿದರು. ಮಂಗಳವಾರ ಬೆಳಿಗ್ಗೆ 5.30ಕ್ಕೆ ಆರಂಭವಾದ ಕಲಾಕೃತಿ ರಚನೆ ಸುಮಾರು 10 ಗಂಟೆಯ ವರೆಗೂ ನಡೆಯಿತು. ಮರಳಿನ ದಿಬ್ಬದಲ್ಲಿ ವರ್ತುಲಾಕಾರದಲ್ಲಿ ಮಂದಿರದ ಪ್ರತಿಕೃತಿಯನ್ನು ಮಂಜುನಾಥ ಅವರು ರಚಿಸಿದರು.

ADVERTISEMENT

ನಂತರ ಬಡಾವಣೆ ಜನರು ಕೇಸರಿ ಧ್ವಜ ನೆಟ್ಟು ವಿಶೇಷ ಪೂಜೆ ಸಲ್ಲಿಸುವ ಭಕ್ತಿಯ ನಮನಗಳನ್ನು ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.