ADVERTISEMENT

ರಂಗಕಲಾವಿದೆ ಲಕ್ಷ್ಮೀಬಾಯಿ ಏಣಗಿ ನಿಧನ

​ಪ್ರಜಾವಾಣಿ ವಾರ್ತೆ
Published 4 ಮೇ 2022, 20:05 IST
Last Updated 4 ಮೇ 2022, 20:05 IST
ಲಕ್ಷ್ಮೀಬಾಯಿ ಏಣಗಿ
ಲಕ್ಷ್ಮೀಬಾಯಿ ಏಣಗಿ   

ಧಾರವಾಡ: ರಂಗ ಕಲಾವಿದೆ ಲಕ್ಷ್ಮೀಬಾಯಿ ಬಾಳಪ್ಪ ಏಣಗಿ (96) ಬುಧವಾರ ನಿಧನರಾದರು.

ದಿ.ಏಣಗಿ ಬಾಳಪ್ಪ ಅವರ ಪತ್ನಿ ಹಾಗೂ ದಿ.ನಟರಾಜ ಏಣಗಿ ಅವರ ತಾಯಿಯಾದ ಲಕ್ಷ್ಮೀಬಾಯಿ ಅವರಿಗೆ ಪುತ್ರಿ ಇದ್ದಾರೆ.

ಏಣಗಿ ಬಾಳಪ್ಪ ಅವರು ಅಭಿನಯದ ನಾಟಕಗಳಲ್ಲಿ ಪ್ರಮುಖ ನಟಿಯಾಗಿ ಲಕ್ಷ್ಮೀಬಾಯಿ ಅವರು ಅಭಿನಯಿಸುತ್ತಿದ್ದರು. ಲಕ್ಷ್ಮೀಬಾಯಿ ಅವರು ಅಭಿನಯಿಸಲು ಆರಂಭಿಸಿದ ನಂತರ ಬಾಳಪ್ಪನವರು ಸ್ತ್ರೀಪಾತ್ರಗಳಿಗೆ ಬಣ್ಣ ಹಚ್ಚುವುದನ್ನು ನಿಲ್ಲಿಸಿದ್ದರು.

ADVERTISEMENT

ಕಂಪನಿಯ ಮಾಲಕಿಯಾಗಿಯೂ ರಂಗಭೂಮಿಯನ್ನು ಮುನ್ನಡೆಸಿದ್ದರು. ಕಿತ್ತೂರು ಚನ್ನಮ್ಮ, ದ್ರೌಪದಿ, ಸೀತೆ, ತಾರಾಮತಿ, ಸಕ್ಕೂಬಾಯಿ, ನೀಲಾಂಬಿಕೆ ಸೇರಿದಂತೆ ಅನೇಕ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ಪ್ರಸಿದ್ಧಿಪಡೆದಿದ್ದರು. ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲೂ ನಟಿಸಿದ್ದರು.

ಡಾ.ಗುಬ್ಬಿ ವೀರಣ್ಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. ಅಂತ್ಯಕ್ರಿಯೆ ನಗರದ ಹೊಸಯಲ್ಲಾಪುರ ರುದ್ರಭೂಮಿಯಲ್ಲಿ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.