ADVERTISEMENT

ಛಬ್ಬಿ: ಕೆಂಪು ಗಣಪತಿ ಉತ್ಸವ ಸೆ.7ರಿಂದ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 13:49 IST
Last Updated 24 ಆಗಸ್ಟ್ 2024, 13:49 IST
 ಕೆಂ‍ಪು ಗಣಪತಿ ಮೂರ್ತಿ
 ಕೆಂ‍ಪು ಗಣಪತಿ ಮೂರ್ತಿ   

ಹುಬ್ಬಳ್ಳಿ: ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಕುಲಕರ್ಣಿ ಮನೆತನದಿಂದ ಕೆಂಪು ಗಣಪತಿ ಉತ್ಸವವು ಸೆ.7ರಿಂದ ಸೆ.9 ರವರೆಗೆ ನಡೆಯಲಿದೆ. ರಾಮಚಂದ್ರ ಕುಲಕರ್ಣಿ, ಮೋಹನರಾವ ಕುಲಕರ್ಣಿ, ವಿನಾಯಕ ಕುಲಕರ್ಣಿ, ನಾರಾಯಣರಾವ ಕುಲಕರ್ಣಿ, ಸೋಮರಾವ ಕುಲಕರ್ಣಿ, ವಿಶ್ವನಾಥ ವಾಸುದೇವ ಕುಲಕರ್ಣಿ ಹಾಗೂ ಮಾಲತೇಶ ಕುಲಕರ್ಣಿ ಅವರ ಮನೆಗಳಲ್ಲಿ ಅದ್ದೂರಿಯಾಗಿ ಉತ್ಸವ ಆಚರಿಸಲಾಗುತ್ತಿದೆ.

ಬಲಗೈಯಲ್ಲಿ ಮುರಿದ ದಂತ, ಎಡಗೈಯಲ್ಲಿ ಈಶ್ವರ ಲಿಂಗ ಹಾಗೂ ಉಳಿದೆರಡು ಕೈಗಳಲ್ಲಿ ಆಯುಧಗಳನ್ನು ಹೊಂದಿರುವುದು ಇಲ್ಲಿನ ಕೆಂಪು ಗಣಪತಿಯ ವಿಶೇಷತೆ. ಮೈಸೂರು ಹಾಗೂ ಇಂದೋರ್‌ನ ಅರಮನೆಗಳಲ್ಲಿ ಮಾತ್ರ ಇಂತಹ ಗಣಪತಿಯನ್ನು ಕಾಣಬಹುದಾಗಿದೆ. 

ಉತ್ಸವದ ಮೊದಲ ದಿನ ಚಂದ್ರೋದಯಕ್ಕೂ ಮುನ್ನ ಏಳು ಮನೆಗಳ ಗಣಪತಿಗಳನ್ನು ಮೆರವಣಿಗೆಯಲ್ಲಿ ತಂದು ಪ್ರತಿಷ್ಠಾಪಿಸಲಾಗುತ್ತದೆ. ಅಂದು ರಾತ್ರಿ 8.30ರ ನಂತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ನಂತರದ ಎರಡು ದಿನ ಭಕ್ತರಿಗೆ ಎಲ್ಲ ಮನೆಗಳಲ್ಲಿ ಉಚಿತ ದರ್ಶನ ಹಾಗೂ ಪ್ರಸಾದ ವ್ಯವಸ್ಥೆ ಇರಲಿದೆ.

ADVERTISEMENT

ಛಬ್ಬಿ ಗ್ರಾಮ ಪಂಚಾಯಿತಿಯಿಂದ ಕುಡಿಯುವ ನೀರು ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಲಾಗುತ್ತದೆ. ಭಕ್ತರ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಿಂದ ಹುಬ್ಬಳ್ಳಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.