
ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ರಂಭಾಪುರಿ ಜಗದ್ಗುರು ವೀರಗಂಗಾಧರ ಸಮುದಾಯ ಭವನದ ಆವರಣದಲ್ಲಿರುವ ರೇಣುಕಾಚಾರ್ಯ ಮಂದಿರದಲ್ಲಿ ಭಾನುವಾರ ರುದ್ರಾಭಿಷೇಕ, ಪೂಜೆ, ಮಹಾಮಂಗಳಾರತಿ ನೆರವೇರಿಸಿ ರೇಣುಕಾಚಾರ್ಯ ಜಯಂತಿ ಆಚರಿಸಲಾಯಿತು.
ಜಗದ್ಗುರು ರಂಭಾಪುರೀಶ ಸಾಂಸ್ಕೃತಿಕ ಸೇವಾ ಸಂಘದ ಅಧ್ಯಕ್ಷ ವಿಶ್ವನಾಥ್ ಹಿರೇಗೌಡರ ಮಾತನಾಡಿ, ‘ಶಿವಯೋಗಿ ಶಿವಾಚಾರ್ಯರು ರಚಿಸಿರುವ ಸಿದ್ಧಾಂತ ಶಿಖಾಮಣಿ ಕೃತಿಯು ವೀರಶೈವ ಧರ್ಮಗ್ರಂಥವೆಂದು ಮಾನ್ಯವಾಗಿದೆ. ಅಂದು ರೇಣುಕಾಚಾರ್ಯರು ಸಂಸ್ಥಾಪಿಸಿದ ವೀರಸಿಂಹಾಸನ ಮಹಾಪೀಠವೇ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿರುವ ರಂಭಾಪುರಿ ಪೀಠ’ ಎಂದರು.
‘ರೇಣುಕಾಚಾರ್ಯರ ತತ್ವಗಳು ಸಮಾನತೆ, ಧಾರ್ಮಿಕ ಸಾಮರಸ್ಯ, ಆಧ್ಯಾತ್ಮಿಕ ಪ್ರಗತಿಗೆ ಆಧುನಿಕ ದಾರಿದೀಪದಂತಿದೆ. ರೇಣುಕಾಚಾರ್ಯರು ಮಾನವನನ್ನು ಮಾದೇವನಾಗಿಸಿದರು. ಸರ್ವ ಜನಾಂಗದ ಹಿತಕ್ಕಾಗಿ 18 ಮಠಗಳನ್ನು ಸ್ಥಾಪಿಸಿ ಲಿಂಗ ಸಮಾನತೆ ಸಾರಿದ ಮಹಾನ್ ಆಚಾರ್ಯರು’ ಎಂದು ಅಭಿಪ್ರಾಯಪಟ್ಟರು.
ಪಾರ್ವತಿ ಅಭಿವೃದ್ಧಿ ಮಹಿಳಾ ಮಂಡಳದ ಅಧ್ಯಕ್ಷೆ ಇಂದುಮತಿ ಮಾನ್ವಿ ಹಾಗೂ ಜಗದ್ಗುರು ರೇಣುಕಾಚಾರ್ಯ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷರಾದ ಎಸ್.ಆರ್. ಅಂಗಡಿ ಮಾತನಾಡಿದರು. ಎಸ್.ವಿ. ಹಿರೇಮಠ, ಎಸ್.ಸಿ. ಕಮ್ಮಾರ್ ವಂದಿಸಿದರು. ಜೀವಿ ಕಲಾ ಬಳಗದ ಅಧ್ಯಕ್ಷ ಗದಗಯ್ಯ ಹಿರೇಮಠ, ಬಸವರಾಜ್ ಸುಳ್ಯದ, ಎಸ್.ಆರ್. ಅಂಗಡಿ, ಯೋಗ ಗುರು ಪಂಚಲಿಂಗಪ್ಪ ಕವಲೂರ್, ಪ್ರಬಯ್ಯ ಹಿರೇಮಠ, ಶಿವಾನಂದ್ ಬೆಂಗೇರಿ, ಎಂ.ಬಿ. ಪೂಜಾರ, ವಿಶ್ವನಾಥ್ ಪಾಟೀಲ್, ಪೂಜಾ ಹಿರೇಗೌಡರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.