ADVERTISEMENT

ಹೊರಟ್ಟಿ ಕೈಗೆ ರಾಜೀನಾಮೆ ನೀಡಿದ 13 ಜನ!

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2024, 15:52 IST
Last Updated 21 ಅಕ್ಟೋಬರ್ 2024, 15:52 IST

ಹುಬ್ಬಳ್ಳಿ: ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರ ಇಲ್ಲಿನ ನಿವಾಸಕ್ಕೆ ಸೋಮವಾರ ಸಂಜೆ ಬಂದ ಸಿ.ಪಿ. ಯೋಗೇಶ್ವರ್‌ ವಿಧಾನ ಪರಿಷತ್‌ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

‘ಯೋಗೇಶ್ವರ್‌ ಅವರು ಸ್ವಇಚ್ಚೆಯಿಂದ ರಾಜೀನಾಮೆ ಸಲ್ಲಿಸಿದ್ದಾರೆ. ಅದನ್ನು ಸ್ವೀಕರಿಸಿದ್ದೇನೆ. ನಾನು ಸಭಾಪತಿಯಾದ ಮೇಲೆ ಇದುವರೆಗೆ 13 ಜನ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿದವರಲ್ಲಿ ಕಾಂಗ್ರೆಸ್‌–2, ಬಿಜೆಪಿ– 9, ಜೆಡಿಎಸ್‌–2 ಸದಸ್ಯರಿದ್ದಾರೆ.

‘ವಿ.ಎಸ್‌. ಉಗ್ರಪ್ಪ (ಕಾಂಗ್ರೆಸ್‌), ಶ್ರೀನಿವಾಸ ಮಾನೆ (ಕಾಂಗ್ರೆಸ್‌), ಸಿ.ಆರ್‌. ಮನೋಹರ್‌ (ಬಿಜೆಪಿ), ಸಿ.ಎಂ. ಇಬ್ರಾಹಿಂ (ಜೆಡಿಎಸ್‌), ಪುಟ್ಟಣ್ಣ (ಬಿಜೆಪಿ), ಬಾಬುರಾವ್‌ ಚಿಂಚನಸೂರ್‌ (ಬಿಜೆಪಿ), ಆರ್‌. ಶಂಕರ್‌ (ಬಿಜೆಪಿ), ಲಕ್ಷ್ಮಣ ಸವದಿ (ಬಿಜೆಪಿ), ಆಯನೂರು ಮಂಜುನಾಥ (ಬಿಜೆಪಿ), ಜಗದೀಶ ಶೆಟ್ಟರ್‌ (ಬಿಜೆಪಿ), ಮರಿತಿಬ್ಬೇಗೌಡ (ಜೆಡಿಎಸ್‌), ಕೆ.ಪಿ. ನಂಜುಂಡಿ (ಬಿಜೆಪಿ) ಹಾಗೂ ಸಿ.ಪಿ. ಯೋಗೇಶ್ವರ್‌ (ಬಿಜೆಪಿ) ರಾಜೀನಾಮೆ ನೀಡಿದ್ದಾರೆ’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.