ADVERTISEMENT

ಗಲಭೆ- ಬಂಧಿತರ ವಿರುದ್ಧ ಕೋಕಾ ಕಾಯ್ದೆ ಬಳಸಿ: ಶ್ರೀರಾಮ ಸೇನೆ ಅಧ್ಯಕ್ಷ ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2022, 8:30 IST
Last Updated 22 ಏಪ್ರಿಲ್ 2022, 8:30 IST
ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ‌ ಮುತಾಲಿಕ್
ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ‌ ಮುತಾಲಿಕ್   

ಹುಬ್ಬಳ್ಳಿ: ಗಲಭೆ ಸಂಬಂಧ ಬಂಧಿತರಾಗಿರುವವರ ವಿರುದ್ಧ ಕೋಕಾ ಕಾಯ್ದೆ ಹಾಕಬೇಕು. ಘಟನೆಗೆ ಕುಮ್ಮಕ್ಕು ನೀಡಿ ನಾಟಕವಾಡುತ್ತಿರುವ‌ ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರು ಮತ್ತು ಮುಖಂಡ ಅಲ್ತಾಫ್ ಕಿತ್ತೂರ ಅವರನ್ನು ಬಂಧಿಸಬೇಕು ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ‌ ಮುತಾಲಿಕ್ ಒತ್ತಾಯಿಸಿದರು.

ಹಳೇ ಹುಬ್ಬಳ್ಳಿ ಗಲಭೆ ಪ್ರದೇಶ ಹಾಗೂ ದಿಡ್ಡಿ ಹನುಮಂತ ದೇವಸ್ಥಾನಕ್ಕೆ ಶುಕ್ರವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು .

ಇದೊಂದು ಪೂರ್ವ ನಿಯೋಜಿತ ಕೃತ್ಯ. ರಜಾಕ್ ಅಕಾಡೆಮಿ ಮತ್ತು ರೀಬಿಲ್ಟ್ ಬಾಬರ್ ಮಸೀದಿ ಸಂಘಟನೆ ಮಾಡಿಕೊಂಡಿದ್ದಾರೆ. ನಗರದ ಎಲ್ಲ ಭಾಗಗಳಿಂದ ಜನರು ಗಲಭೆಗೆ ಬಂದಿದ್ದಾರೆ. ಒಂದು ಗಲಾಟೆಗೆ ಎಲ್ಲರೂ ಹೆದರುವುದು ಏಕೆ. ಗಲಭೆಯಲ್ಲಿದ್ದ ಸಾವಿರಕ್ಕೂ ಹೆಚ್ಚು ಜನರ ಬಂಧನ ಆಗಬೇಕು. ಬೇಕಿದ್ದರೆ ನಾವೇ ಹೆಸರು ಕೊಡುತ್ತೇವೆ. ಪೊಲೀಸರು ರಿಸ್ಕ್ ತೆಗೆದುಕೊಂಡು ಕಂಟ್ರೋಲ್ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು. ಮತ್ತೊಂದು ಕೆ.ಜಿ., ಡಿ.ಜಿ. ಹಳ್ಳಿ ರೀತಿಯ ಗಲಭೆಯನ್ನು ಪೊಲೀಸರು ತಪ್ಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ದೇವಸ್ಥಾನಕ್ಕೆ ಕಲ್ಲು ತೂರಾಟ ಘಜ್ನಿ ಮನಸ್ಥಿತಿ ತೋರುತ್ತದೆ. ಸ್ಟೇಟಸ್‌ನಲ್ಲಿ ಏನಿದೆ. ಮಸೀದಿ ಮೇಲೆ ಭಾಗವಾಧ್ವಜ ಹಾರಿಸಿದರೆ ಏನಾಗುತ್ತದೆ. ಬೆಂಗಳೂರು‌ ಮಸೀದಿ ಮೇಲೆ ಕೇಸರಿ ಧ್ವಜ, ಹಿಜಾಬ್ ಹಾಕಿಲ್ಲವೆ. ಗಲಾಟೆಗೆ ಇದೊಂದು ಕಾರಣ ಅಷ್ಟೇ. ಇಂತಹ ಕೃತ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಕಾಶ್ಮೀರದಲ್ಲಿ ಮಾಡಿರುವ ಭಯ ಭೀತಿಯನ್ನು ಇಲ್ಲಿ ಸೃಷ್ಟಿಸುವ ಹುನ್ನಾರ ಇದಾಗಿದೆ.

ಮಸೀದಿಗಳಲ್ಲಿ ಆಜಾನ್ ಬಂದ್ ಮಾಡಲು ಮೇ 9ರ ತನಕ ಗಡುವು ನೀಡುತ್ತೇವೆ. ನಂತರ ದೇವಸ್ಥಾನಗಳಲ್ಲಿ ಓಂಕಾರ, ಭಜನೆ ಹೀಗೆ ಕಾರ್ಯಕ್ರಮಗಳು ಆರಂಭವಾಗಲಿದೆ. ನೆಪ ಮಾತ್ರಕ್ಕೆ ನೊಟೀಸ್ ನೀಡಿರುವುದು ಕಣ್ಣೊರೆಸುವ ತಂತ್ರವಾಗಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.