ADVERTISEMENT

ರುದ್ರಾಕ್ಷಿ ಪ್ರದರ್ಶನ,ಮಾರಾಟ ಫೆ. 23 ರವರೆಗೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2022, 3:49 IST
Last Updated 20 ಫೆಬ್ರುವರಿ 2022, 3:49 IST
ವಿವಿಧ ಬಗೆಯ ರುದ್ರಾಕ್ಷಿಗಳು
ವಿವಿಧ ಬಗೆಯ ರುದ್ರಾಕ್ಷಿಗಳು   

ಹುಬ್ಬಳ್ಳಿ: ಹೈದರಾಬಾದ್‌ ಮೂಲದ ಇಂಡಸ್-ನೇಪಾಳ ರುದ್ರಾಕ್ಷಿ ಸಂಸ್ಥೆಯು ಫೆ. 23 ರವರೆಗೆ ನೇಪಾಳದರುದ್ರಾಕ್ಷಿಗಳ ಪ್ರದರ್ಶನ ಮತ್ತು ಮಾರಾಟವನ್ನು ಇಲ್ಲಿಯ ಟಿ.ಬಿ. ರಸ್ತೆಯ ಹೊಟೇಲ್‌ ರೇವಣಕರ ಕಂಫರ್ಟ್ಸ್‌ನಲ್ಲಿ ಆಯೋಜಿಸಿದೆ.

ಯಾವ ರುದ್ರಾಕ್ಷಿಯನ್ನು ಯಾವಾಗ ಮತ್ತು ಯಾರು ಧರಿಸಬೇಕು ಎನ್ನುವುದರ ಕುರಿತು ಸಹ ಪಂಚಾಂಗ ಮತ್ತು ಕಂಪ್ಯೂಟರ್ ಸಹಾಯವಿಲ್ಲದೆ ವೇದ ಗಣಿತದ ಮೂಲಕ ಜನ್ಮ ರಾಶಿ, ಜನ್ಮ ನಕ್ಷತ್ರಗಳನ್ನು ನೋಡಿ ತಿಳಿಸಲಾಗುತ್ತದೆ. ಸಸ್ಯಹಾರಿಗಳು ಹಾಗೂ ಮಾಂಸಾಹಾರಿಗಳು ಸಹ ರುದ್ರಾಕ್ಷಿ ಧರಿಸಿ ಅಧ್ಯಾತ್ಮ ಪಡೆದುಕೊಳ್ಳಬಹುದು.

ರುದ್ರಾಕ್ಷಿ ಬೆಲೆ ಕನಿಷ್ಠ ₹100ರಿಂದ ₹ 1.5 ಲಕ್ಷದ ವರೆಗೆ ಇವೆ. ರುದ್ರಾಕ್ಷಿ ಪ್ರದರ್ಶನವು ಬೆಳಿಗ್ಗೆ 10ರಿಂದ ರಾತ್ರಿ 9ರ ವರೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.