ಧಾರವಾಡ: ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ಅವರು ನವಲಗುಂದ ತಾಲ್ಲೂಕಿನ ನಾಯಕನೂರು ಸಮೀಪ ಜಮೀನುಗಳಲ್ಲಿ ಬೆಳೆ ಹಾನಿ ವೀಕ್ಷಿಸಿದರು.
ಮಳೆಯಿಂದಾಗಿ ಹೆಸರು, ಈರುಳ್ಳಿ ಬೆಳೆ ಹಾನಿಯಾಗಿರುವುದನ್ನು ಪರಿಶೀಲಿಸಿದರು.
ಹೆಸರು ಕಾಯಿಗಳು ಗಿಡದಲ್ಲಿಯೇ ಮೊಳಕೆಯೊಡೆದಿವೆ, ಅಧಿಕ ತೇವಾಂಶದಿಂದ ಈರುಳ್ಳಿ ಬೆಳೆ ಕಂದಿದೆ ಎಂದು ಬೆಳೆಗಾರರು ಸಚಿವರಿಗೆ ತಿಳಿಸಿದರು.
ನವಲಗುಂದದ ಗುಡ್ಡದ ಕೇರಿ ಓಣಿಯಲ್ಲಿ ಮಳೆಯಿಂದಾಗಿ ಗೋಡೆ ಕುಸಿದ ಮನೆಗೆ ಸಚಿವ ಲಾಡ್ ಭೇಟಿ ನೀಡಿ ವೀಕ್ಷಿಸಿದರು. ಕುಟುಂಬದವರಿಗೆ ₹ 25 ಸಾವಿರ ನೆರವು ನೀಡಿದರು.
ಯಂಕವ್ವ ಅವರು ನೀಡಿದ ಕರಿಗಡಬು, ಮಂಡಕ್ಕಿ ಸೇವಿಸಿದ ಸಂತೋಷ ಲಾಡ್
ಶಾಸಕ ಎನ್.ಎಚ್.ಕೋನರೆಡ್ಡಿ, ಜಿಲ್ಲಾಧಿಕಾರಿ ದಿವ್ಯ ಪ್ರಭು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.