ADVERTISEMENT

ಭದ್ರತಾ ಲೋಪ: ಬ್ಯಾರಿಕೇಡ್ ಹಾರಿ ಮೋದಿಗೆ ಹಾರ ಹಾಕಲು ಯತ್ನಿಸಿದ ಯುವಕ

ಪ್ರಧಾನಿ ಮೋದಿ ರೋಡ್ ಶೋ

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 11:34 IST
Last Updated 12 ಜನವರಿ 2023, 11:34 IST
ಮೋದಿಗೆ ಹಾರ ಹಾಕಲು ಯತ್ನಿಸಿದ ಯುವಕ
ಮೋದಿಗೆ ಹಾರ ಹಾಕಲು ಯತ್ನಿಸಿದ ಯುವಕ   

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿದ ಮೋದಿ ಅವರಿಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಸೇರಿದಂತೆ ಬಹುತೇಕ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಿ ಬಿಗಿ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.

ಆದರೆ ಭದ್ರತಾ ಲೋಪವೊಂದು ಕಂಡು ಬಂದಿದ್ದು, ಯುವಕನೊಬ್ಬ ಬ್ಯಾರಿಕೇಡ್ ದಾಟಿ ಮೋದಿಯವರಿಗೆ ಹಾರ ಹಾಕಲು ಬಂದಿದ್ದಾನೆ.

ಹೌದು.. ಮೋದಿ ರೋಡ್ ಶೋ ವೇಳೆ ಭದ್ರತಾ ಲೋಪವಾಗಿದ್ದು, ಬ್ಯಾರಿಕೇಡ್​ ಹಾರಿ ಮೋದಿ ಕಾರಿನತ್ತ ನುಗ್ಗಿದ ಯುವಕ ಮೋದಿಗೆ ಹೂವಿನ ಹಾರ ಹಾಕಲು ಯತ್ನಿಸಿದ್ದಾನೆ.

ADVERTISEMENT

ಇನ್ನೂ ಖುದ್ದು ಮೋದಿ ಕೈಗೆ ಹೂವಿನ ಹಾರ ಕೊಡಲು ಯತ್ನಿಸಿದ್ದು, ಬಳಿಕ ಯುವಕನನ್ನು ಎಳೆದೊಯ್ದಿದ್ದಾರೆ. ಪೊಲೀಸರ ಕರ್ತವ್ಯ ಲೋಪದ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.