ADVERTISEMENT

ತುಮಕೂರಿನ ಶಿವಕುಮಾರ ಸ್ವಾಮೀಜಿಯ 115ನೇ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 3:01 IST
Last Updated 4 ಏಪ್ರಿಲ್ 2022, 3:01 IST
ಹುಬ್ಬಳ್ಳಿಯ ಕಲ್ಲೂರ ಮತ್ತು ಜವಳಿ ಗಾರ್ಡನ್ ನಿವಾಸಿಗಳ ಸಂಘ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿ ಸಹಯೋಗದಲ್ಲಿ ನಡೆದ ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವದಲ್ಲಿ ಗಣ್ಯರು ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು
ಹುಬ್ಬಳ್ಳಿಯ ಕಲ್ಲೂರ ಮತ್ತು ಜವಳಿ ಗಾರ್ಡನ್ ನಿವಾಸಿಗಳ ಸಂಘ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿ ಸಹಯೋಗದಲ್ಲಿ ನಡೆದ ಶಿವಕುಮಾರ ಸ್ವಾಮೀಜಿ ಜಯಂತ್ಯುತ್ಸವದಲ್ಲಿ ಗಣ್ಯರು ಸ್ವಾಮೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು   

ಹುಬ್ಬಳ್ಳಿ: ‘ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರು ಸಮಷ್ಠಿ ಕಲ್ಯಾಣವನ್ನೇ ತಮ್ಮ ಜೀವನದುದ್ದಕ್ಕೂ ಪಾಲಿಸಿಕೊಂಡು ಬಂದರು’ ಎಂದು ಸಾಹಿತಿ ಪ್ರೊ. ಎಸ್.ವಿ. ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.

ನಗರದ ಕಲ್ಲೂರ ಮತ್ತು ಜವಳಿ ಗಾರ್ಡನ್ ನಿವಾಸಿಗಳ ಸಂಘ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿ ಸಹಯೋಗದಲ್ಲಿ ಇತ್ತೀಚೆಗೆ ನಡೆದ ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

‘ಮಕ್ಕಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ಸ್ವಾಮೀಜಿ, ಲಕ್ಷಾಂತರ ಮಕ್ಕಳಿಗೆ ತಾಯಿ ಕರುಣೆ ಮತ್ತು ಪ್ರೀತಿಯನ್ನು ಧಾರೆಯೆರೆದರು. ಅಕ್ಷರದ ಜೊತೆ‌ಗೆ ಅನ್ನ ದಾಸೋಹ ಮಾಡಿದರು’ ಎಂದರು. ಸಂಘದ ಅಧ್ಯಕ್ಷ ಆರ್.ಸಿ. ಹಲಗತ್ತಿ ಹಾಗೂ ನಿವೃತ್ತ ಗ್ರಂಥಪಾಲಕ ಡಾ.ಬಿ.ಎಸ್. ಮಾಳವಾಡ ಮಾತನಾದರು.

ADVERTISEMENT

ಪ್ರೊ.ವಿ.ಬಿ. ಮಾಗನೂರ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ಸುರೇಶ ಡಿ. ಹೊರಕೇರಿ ನಿರೂಪಣೆ ಮಾಡಿದರು. ಮಾಧುರಿ ದೇಶಪಾಂಡೆ ವಂದಿಸಿದರು. ದಾಕ್ಷಾಯಿಣಿ ಕೋಳಿವಾಡ ವಚನಗಳನ್ನು ಹಾಡಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಹ ಕಾರ್ಯದರ್ಶಿ ಶಂಕರ ಕೋಳಿವಾಡ, ಸಿದ್ಧಲಿಂಗೇಶ್ವರ ವಾಲಿ, ಎಂ.ಎ. ಹಿರೇಮಠ, ಈಶ್ವರ ಹಂದಿಗೋಳ, ಎಸ್.ಬಿ. ಹೊಂಬಳ, ಅಶೋಕ ತಾಳಿಕೋಟಿ, ಶಂಬುಲಿಂಗ ಬಡಿಗೇರ, ಎನ್.ಬಿ. ಬೆಳ್ಳಿಗಟ್ಟಿ, ಸುಷ್ಮಾ ವಾಲಿ, ಸುರೇಶ ಚವ್ಹಾಣ, ಸಿ.ಜಿ. ಶೆಟ್ಟರ, ರಾಜೇಶ್ವರಿ ತಾಳಿಕೋಟಿ, ಅನುಸೂಯಮ್ಮ, ನೀಲಾಂಬಿಕಾ ಶಿವಮೂರ್ತಿ, ಸವಿತಾ ಗೊವೇಶ್ವರಿ, ಸವಿತಾ ಬಗಲಿ, ಶೋಭಾ ಬಡಿಗೇರ, ನಂದಿನಿ ಕೋಟಿ, ಶೀಲಾ ಕೋಟಿ, ಎಸ್.ಬಿ. ಹೊಂಬಳ, ಕೆ. ಶಿಲ್ಪಾ ಗಿರೀಶ, ಎಸ್.ಐ. ಕತ್ತಿಶೆಟ್ಟಿ, ಆನಂದ ಘಟಪನದಿ, ಅನಂತ ಕುಲಕರ್ಣಿ, ರವೀಂದ್ರ ಎಂ.ಜಿ, ಡಾ. ಬಸವಕುಮಾರ ತಲವಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.