ADVERTISEMENT

ಕ.ವಿ.ವಿ ಸ್ಥಾಪನೆಗೆ ಶ್ರಮಿಸಿದ ಸಿದ್ದಪ್ಪ ಕಂಬಳಿ: ಪ್ರೊ. ಮಂಜಳಾ ಸಾಳುಂಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 4:40 IST
Last Updated 12 ಸೆಪ್ಟೆಂಬರ್ 2025, 4:40 IST
ಧಾರವಾಡದ ಕೆಸಿಡಿ ಕಾಲೇಜಿನ ಆವರಣದ ಸಿದ್ದಪ್ಪ ಕಂಬಳಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು
ಧಾರವಾಡದ ಕೆಸಿಡಿ ಕಾಲೇಜಿನ ಆವರಣದ ಸಿದ್ದಪ್ಪ ಕಂಬಳಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು   

ಧಾರವಾಡ: ಉತ್ತರ ಕರ್ನಾಟಕದವರಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದಕ್ಕಾಗಿ ಸಿದ್ದಪ್ಪ ಕಂಬಳಿ ಅವರು ಕರ್ನಾಟಕ ಕಾಲೇಜು ಮತ್ತು ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪಿಸಲು ಪ್ರಮುಖ ಪಾತ್ರ ವಹಿಸಿದರು ಎಂದು ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಪ್ರೊ. ಮಂಜಳಾ ಸಾಳುಂಕೆ ಹೇಳಿದರು.

ಸಿದ್ದಪ್ಪ ಕಂಬಳಿ ಅವರ 143ನೇ ಜಯಂತ್ಯುತ್ಸವ ಅಂಗವಾಗಿ ಕರ್ನಾಟಕ ಕಾಲೇಜಿನ ಆವರಣದಲ್ಲಿರುವ ಅವರ ಪುತ್ಥಳಿಗೆ ಗುರುವಾರ ಮಾಲಾರ್ಪಣೆ ಮಾಡಿ ಮಾತನಾಡಿದರು.

‘ಬ್ರಿಟಿಷ್ ಸರ್ಕಾರದಲ್ಲಿ ಸಿದ್ದಪ್ಪ ಕಂಬಳಿ ಅವರು ಶಿಕ್ಷಣ ಖಾತೆಯ ಜೊತೆಗೆ ಏಳು ಖಾತೆಗಳನ್ನು ಹೊಂದಿದ್ದರು. ಶಿಕ್ಷಣದ ಪ್ರೇಮಿ ಆಗಿದ್ದ ಅವರು ಸಾಮಾಜಿಕ ಚಿಂತನೆ, ಮೌಲ್ಯಗಳನ್ನು ಹೊಂದಿದ್ದರು’ ಎಂದರು.

ADVERTISEMENT

ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಐ.ಸಿ.ಮುಳಗುಂದ, ಸಿದ್ದಪ್ಪ ಕಂಬಳಿ ಟ್ರಸ್ಟ್ ಸದಸ್ಯ ಶಂಕರ ಕುಂಬಿ, ಜಗದೀಶ್ ಗುಡಗೂರ, ಕೆ.ಕೋಟ್ರೇಶ, ಬಿ.ಬಿ.ಬಿರಾದಾರ, ಎಂ.ಎನ್.ಮ್ಯಾಗೇರಿ, ವೀರೇಂದ್ರ ಯಾದವ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.