ADVERTISEMENT

ಹುಬ್ಬಳ್ಳಿ: 10 ಸಿಬ್ಬಂದಿಗೆ ಸುರಕ್ಷತಾ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2025, 14:28 IST
Last Updated 24 ಜನವರಿ 2025, 14:28 IST
ಹುಬ್ಬಳ್ಳಿಯ ರೈಲ್‌ಸೌಧದಲ್ಲಿ ಸುರಕ್ಷತಾ ಪ್ರಶಸ್ತಿ ಪಡೆದ ರೈಲ್ವೆ ಸಿಬ್ಬಂದಿ
ಹುಬ್ಬಳ್ಳಿಯ ರೈಲ್‌ಸೌಧದಲ್ಲಿ ಸುರಕ್ಷತಾ ಪ್ರಶಸ್ತಿ ಪಡೆದ ರೈಲ್ವೆ ಸಿಬ್ಬಂದಿ   

ಹುಬ್ಬಳ್ಳಿ: ನಗರದ ಗದಗ ರಸ್ತೆಯ ರೈಲ್‌ಸೌಧದ ಸಭಾಂಗಣದಲ್ಲಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರು, ವಿವಿಧ ಇಲಾಖೆಗಳ ಮುಖ್ಯಸ್ಥರೊಂದಿಗೆ ಸುರಕ್ಷತೆ ಸಂಬಂಧ ಸಭೆ ನಡೆಸಿದರು. ಕರ್ತವ್ಯದ ವೇಳೆ ಜಾಗರೂಕತೆಯಿಂದ ಅಹಿತಕರ ಘಟನೆಗಳನ್ನು ತಪ್ಪಿಸುವಲ್ಲಿ ಮತ್ತು ಸುರಕ್ಷಿತವಾಗಿ ರೈಲು ಕಾರ್ಯಾಚರಣೆಗೆ ಶ್ರಮಿಸಿದ ಸಿಬ್ಬಂದಿಯನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ 10 ಮಂದಿ ಸಿಬ್ಬಂದಿಗೆ ಸುರಕ್ಷತಾ ಪ್ರಶಸ್ತಿ ನೀಡಿದರು. ಹುಬ್ಬಳ್ಳಿ ವಿಭಾಗದ ಮಂಥಾ ಜಗನ್ನಾಥ ರಾವ್, ವಿಶ್ವೇಶ್ವರ ಆನಂದ, ತಾರಾಚಂದ್ ಝಾಟ್, ಬೆಂಗಳೂರು ವಿಭಾಗದ ಮಂಜುನಾಥನ್, ಬಿ. ರಾಮಾಂಜಿಯನೇಯಲು, ಮೈಸೂರು ವಿಭಾಗದ ಹರೀಶ್, ಆನಂದ, ಶ್ರೀಧರ್ ಡಿ.ಆರ್., ತಿಪ್ಪೇಶಪ್ಪ ಮತ್ತು ರವಿಕುಮಾರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT