ರೈಲು
– ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ: ಕಾರ್ತೀಕ ಏಕಾದಶಿ ಉತ್ಸವಕ್ಕೆ ತೆರಳುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮತ್ತು ಪ್ರಯಾಣಿಕರ ದಟ್ಟಣೆ ನಿಭಾಯಿಸಲು ಇಲ್ಲಿನ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲುನಿಲ್ದಾಣ ಮತ್ತು ಪಂಢರಪುರ ರೈಲುನಿಲ್ದಾಣಗಳ ನಡುವೆ ಕಾಯ್ದಿರಿಸದ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಕಾರ್ಯಾಚರಣೆಗೆ ನೈರುತ್ಯ ರೈಲ್ವೆ ನಿರ್ಧರಿಸಿದೆ.
ಅಕ್ಟೋಬರ್ 29 ಮತ್ತು ನವೆಂಬರ್ 1ರಂದು ಮುಂಜಾನೆ 5.10ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು (07351), ಸಂಜೆ 4 ಗಂಟೆಗೆ ಪಂಢರಪುರ ತಲುಪಲಿದೆ. ಅದೇ ದಿನಗಳಲ್ಲಿ ಸಂಜೆ 6 ಗಂಟೆಗೆ ಪಂಢರಪುರ ನಿಲ್ದಾಣದಿಂದ ಹೊರಡುವ ರೈಲು (07352) ಮರುದಿನ ಮುಂಜಾನೆ 4 ಗಂಟೆಗೆ ಹುಬ್ಬಳ್ಳಿ ನಿಲ್ದಾಣಕ್ಕೆ ಬರಲಿದೆ.
ಈ ರೈಲು 1 ಎ.ಸಿ 2 ಟೈರ್, 2 ಎ.ಸಿ 3 ಟೈರ್, 12 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಎಸ್‌ಎಲ್‌ಆರ್/ಡಿ ಬೋಗಿಗಳನ್ನು ಒಳಗೊಂಡಿದೆ.
ಅಕ್ಟೋಬರ್ 30, 31 ಮತ್ತು ನವೆಂಬರ್ 2, 3ರಂದು ಮುಂಜಾನೆ 5.10ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಡುವ ರೈಲು (07367), ಸಂಜೆ 4 ಗಂಟೆಗೆ ಪಂಢರಪುರ ತಲುಪಲಿದೆ. ಅದೇ ದಿನಗಳಲ್ಲಿ ಸಂಜೆ 6 ಗಂಟೆಗೆ ಪಂಢರಪುರದಿಂದ ಮರಳುವ ರೈಲು (07368), ಮರುದಿನ ಮುಂಜಾನೆ 4 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ.
ಈ ರೈಲು 10 ಸ್ಲೀಪರ್ ಕ್ಲಾಸ್/ಸಾಮಾನ್ಯ ದ್ವಿತೀಯ ದರ್ಜೆ ಮತ್ತು 2 ಎಸ್‌ಎಲ್‌ಆರ್/ಡಿ ಬೋಗಿ ಒಳಗೊಂಡಿದೆ.
ಎರಡೂ ವಿಶೇಷ ರೈಲುಗಳು ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ, ದೇಸೂರು, ಬೆಳಗಾವಿ, ಪಚ್ಚಾಪುರ, ಗೋಕಾಕ ರೋಡ್, ಘಟಪ್ರಭಾ, ಚಿಕ್ಕೋಡಿ ರೋಡ್, ರಾಯಬಾಗ, ಚಿಂಚಲಿ, ಕುಡಚಿ, ಉಗಾರ ಖುರ್ದ್, ಶೇಡಬಾಳ, ಮೊದಲಾದ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.