ADVERTISEMENT

ಬೆಳಗಾವಿ– ಯಶವಂತಪುರ ವಿಶೇಷ ರೈಲು

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2022, 16:33 IST
Last Updated 9 ಆಗಸ್ಟ್ 2022, 16:33 IST

ಹುಬ್ಬಳ್ಳಿ: ಕೃಷ್ಣ ಜನ್ಮಾಷ್ಟಮಿ, ಸ್ವಾತಂತ್ರ್ಯ ದಿನಾಚರಣೆ ಹಾಗೂ ಗಣೇಶ ಚತುರ್ಥಿ ಅಂಗವಾಗಿ ಯಶವಂತಪುರ– ಬೆಳಗಾವಿ ಮಧ್ಯೆ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ವಿಶೇಷ ರೈಲುಗಳನ್ನು ನಿತ್ಯ ಒಂದು ಟ್ರಿಪ್ ಓಡಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

ಆ. 12ರಂದು ಯಶವಂತಪುರದಿಂದ ರಾತ್ರಿ 9.30ಕ್ಕೆ ಹೊರಡಲಿರುವ ಯಶವಂತಪುರ– ಬೆಳಗಾವಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ವಿಶೇಷ ರೈಲು (07371/ 07372)ಮಾರನೇ ದಿನ ಬೆಳಿಗ್ಗೆ 8.25ಕ್ಕೆ ಬೆಳಗಾವಿ ತಲುಪಲಿದೆ.ಇಲ್ಲಿಂದ ಆ. 15ರಂದುರಾತ್ರಿ 9.20ಕ್ಕೆ ಹೊರಟು ಮಾರನೇ ದಿನ ಬೆಳಿಗ್ಗೆ 8.20ಕ್ಕೆ ಯಶವಂತಪುರಕ್ಕೆ ತಲುಪಲಿದೆ.

ಆ. 18ರಂದು ಯಶವಂತಪುರದಿಂದ ರಾತ್ರಿ 9.30ಕ್ಕೆ ಹೊರಡಲಿರುವ ವಿಶೇಷ ರೈಲು (07373/ 07374) ಮಾರನೇ ದಿನ ಬೆಳಿಗ್ಗೆ 8.25ಕ್ಕೆ ಬೆಳಗಾವಿಗೆ ಬರಲಿದೆ.ಇಲ್ಲಿಂದ ಆ. 21ಕ್ಕೆ ರಾತ್ರಿ 9.20ಕ್ಕೆ ಹೊರಟು ಮಾರನೇ ದಿನ ಬೆಳಿಗ್ಗೆ 8.20ಕ್ಕೆ ಯಶವಂತಪುರ ತಲುಪಲಿದೆ.

ADVERTISEMENT

ವೆಲಂಕಣಿಗೆ ವಿಶೇಷ ರೈಲು:ತಮಿಳುನಾಡಿನ ವೆಲಂಕಣಿ ಮಂದಿರದ ಜಾತ್ರೆ ಅಂಗವಾಗಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಗೋವಾದ ವಾಸ್ಕೊ ಡ ಗಾಮಾದಿಂದ ವಿಶೇಷ ರೈಲು ನಿತ್ಯ ಒಂದು ಟ್ರಿಪ್ ಸಂಚರಿಸಲಿದೆ.

ವಾಸ್ಕೊ ಡ ಗಾಮಾದಿಂದ ಆ. 27ರಂದು ಬೆಳಿಗ್ಗೆ 9ಕ್ಕೆ ಹೊರಡಲಿರುವ ವಿಶೇಷಎಕ್ಸ್‌ಪ್ರೆಸ್‌ ರೈಲು (07357/ 07358) ಮಾರನೇ ದಿನ ಮಧ್ಯಾಹ್ನ 12.25ಕ್ಕೆ ವೆಲಂಕಣಿ ತಲುಪಲಿದೆ. ಆ.28ರಂದು ರಾತ್ರಿ 11.45ಕ್ಕೆಅಲ್ಲಿಂದ ಹೊರಡಲಿರುವ ರೈಲು ಆ.30ರಂದು ಬೆಳಿಗ್ಗೆ 4ಕ್ಕೆ ವಾಸ್ಕೊ ಡ ಗಾಮಾಕ್ಕೆ ಬರಲಿದೆ.

ಸೆ. 2ರಂದು ವಾಸ್ಕೊ ಡ ಗಾಮಾದಿಂದ ಮಧ್ಯಾಹ್ನ 2.30ಕ್ಕೆ ಹೊರಡಲಿರುವ ವಿಶೇಷ ರೈಲು (07359/07360) ಮಾರನೇ ದಿನ ರಾತ್ರಿ 7.10ಕ್ಕೆ ವೆಲಂಕಣಿಗೆ ತಲುಪಲಿದೆ. ಸೆ.4ರಂದು ಬೆಳಿಗ್ಗೆ 9.15ಕ್ಕೆ ಅಲ್ಲಿಂದ ಹೊರಟು ಮಾರನೇ ದಿನ ಬೆಳಿಗ್ಗೆ 10ಕ್ಕೆ ವಾಸ್ಕೊ ಡ ಗಾಮಾ ತಲುಪಲಿದೆ.

ಸೆ. 6ರಂದುವಾಸ್ಕೊ ಡ ಗಾಮಾದಿಂದ ಸಂಜೆ 7.05ಕ್ಕೆ ಹೊರಡಲಿರುವ ವಿಶೇಷ ರೈಲು (07361/ 07362) ಮಾರನೇ ದಿನ ರಾತ್ರಿ 11.30ಕ್ಕೆ ವೆಲಂಕಣಿಗೆ ಬರಲಿದೆ. 8ರಂದು ಬೆಳಿಗ್ಗೆ 9.15ಕ್ಕೆ ವೆಲಂಕಣಿಯಿಂದ ಹೊರಟು ಮಾರನೇ ದಿನ ಬೆಳಿಗ್ಗೆ 10ಕ್ಕೆ ವಾಸ್ಕೊ ಡ ಗಾಮಾ ಸೇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.