ADVERTISEMENT

ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 6:48 IST
Last Updated 10 ಫೆಬ್ರುವರಿ 2026, 6:48 IST
ಚಿತ್ರಾವಳಿ: ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ಮೂರ್ತಿ
ಚಿತ್ರಾವಳಿ: ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ಮೂರ್ತಿ   

ಉಪ್ಪಿನಬೆಟಗೇರಿ: ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿಯ 2ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಗ್ರಾಮದ ಹಳೆಯ ಬಸ್ ನಿಲ್ದಾಣ ಮೈದಾನದಲ್ಲಿ ಫೆ.10 ರಿಂದ ಆಧ್ಯಾತ್ಮಿಕ ಪ್ರವಚನ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ ಶಿವಲಿಂಗಕ್ಕೆ ಚನ್ನಮಲ್ಲಯ್ಯ ನಂದಿಕೋಲಮಠ, ನಾಗಯ್ಯ ಕೊಣ್ಣೂರಮಠ, ಪುನೀತ ಹಿರೇಮಠ ಅವರ ವೈದಿಕತ್ವದಲ್ಲಿ ನಿತ್ಯ ರುದ್ರಾಭಿಷೇಕ ಜರುವುದು.

ಕಲಬುರ್ಗಿ ಜಿಲ್ಲೆ ಶಹಬಾದ ತಾಲ್ಲೂಕಿನ ರಾವೂರ ಸಿದ್ಧಲಿಂಗೇಶ್ವರ ಸಂಸ್ಥಾನಮಠದ ಸಿದ್ಧಲಿಂಗ ಸ್ವಾಮೀಜಿ 5 ದಿನ ಪ್ರವಚನ ನೀಡಲಿದ್ದಾರೆ. ಹೆಬ್ಬಳ್ಳಿಯ ಬ್ರಹ್ಮ ಚೈತನ್ಯಾಶ್ರಮದ ಶ್ರೀದತ್ತಾವಧೂತ ಮಹಾರಾಜರು ಪ್ರವಚನ ಮಾಲಿಕೆ ಉದ್ಘಾಟಿಸುವರು. ನಾಡಿನ ವಿವಿಧೆಡೆಯ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುವರು. ನಿತ್ಯ ಅನ್ನಪ್ರಸಾದ ವ್ಯವಸ್ಥೆ ಜರುಗಲಿದೆ.

ADVERTISEMENT

ಫೆ.15 ರಂದು ಶಿವರಾತ್ರಿಯ ದಿನ ಸಂಜೆ 5 ಗಂಟೆಗೆ ಜರುಗಲಿರುವ ನೂತನ ರಥೋತ್ಸವವನ್ನು ಹೆಬ್ಬಳ್ಳಿಯ ದತ್ತಾವಧೂತ ಶ್ರೀಗಳು ಹಾಗೂ ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಉದ್ಘಾಟಿಸುವರು. ನೂತನ ರಥ ನಿರ್ಮಾಣ ಮಾಡಿರುವ ಸಾವಿತ್ರಿ ಮಟ್ಟಿ ಹಾಗೂ ಚೆನ್ನಬಸಪ್ಪ ಮಟ್ಟಿ ಅವರನ್ನು ಗೌರವಿಸಲಾಗುವುದು.

ಫೆ.16 ರಂದು ಬೆಳಿಗ್ಗೆ ಕಡುಬಿನ ಕಾಳಗ ನಂತರ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿ ಪಲ್ಲಕ್ಕಿ ಉತ್ಸವ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ– 9535712890, 9449788181 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.