ಗುಡಗೇರಿ ಗ್ರಾಮದ ಫಕೀರಪ್ಪ ಚನ್ನಬಸಪ್ಪ ಮತ್ತೂರು ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಪಿಯು ವಿಭಾಗದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಗುಡಗೇರಿ: ವಿದ್ಯಾಥಿಗಳು ತಮ್ಮ ಅಮೂಲ್ಯ ಸಮಯವನ್ನು ಸದ್ವಿನಿಯೋಗ ಮಾಡಿಕೊಂಡು ಅಧ್ಯಯನಶಿಲರಾಗಬೇಕು ಎಂದು ಕಾರ್ಮಿಕ ಇಲಾಖೆಯ ನಿವೃತ್ತ ಆಯುಕ್ತ ಎಸ್.ಎಫ್.ಬೆಂಗೇರಿ ಹೇಳಿದರು.
ಅವರು ಗ್ರಾಮದ ಫಕೀರಪ್ಪ ಚನ್ನಬಸಪ್ಪ ಮತ್ತೂರು ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆಯ ಪಿಯು ವಿಭಾಗದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿವಿಧ ಚಟುವಟಿಕೆಗಳ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಇದು ಸ್ಪರ್ಧಾತ್ಮಕ ಯುಗವಾಗಿದ್ದು, ಶಿಕ್ಷಣದ ಜೊತೆಗೆ ನೈತಿಕ ಮೌಲ್ಯ ಮೈಗೂಡಿಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು ಎಂದರು.
ಜಾನಪದ ಕಲಾವಿದ ಶಂಭಯ್ಯ.ಎಸ್. ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ಅಂಕಗಳಿಸುವುದಕ್ಕಿಂತ, ಉತ್ತಮ ಸಂಸ್ಕಾರ ಹೊಂದಬೇಕು, ತಂದೆ-ತಾಯಿ ಅವರ ಋಣ ತೀರಿಸಬೇಕು, ಮಕ್ಕಳ ಶ್ರೇಯೋಭಿವೃದ್ದಿಗಾಗಿ ಪಾಲಕರು ಪಡುವ ಶ್ರಮವನ್ನು ಬಹಳ ಮಾರ್ಮಿಕವಾಗಿ ಜನಪದ ಹಾಡುಗಳ ಮೂಲಕ ಅರಿವು ಮೂಡಿಸಿದರು.
ಗ್ರಾಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ವಿ.ವಿ.ರಂಗನಗೌಡ್ರ ಕಾರ್ಯಕ್ರಮ ಉದ್ಘಾಟಿಸಿದರು. ವರ್ಗಾವಣೆಗೊಂಡ ಉಪನ್ಯಾಸಕ ಡಾ.ಬಿ.ಎಂ.ಮರಳಿಹಳ್ಳಿ, ಡಾ.ಶಂಕ್ರಪ್ಪ.ಬಿ.ಈಟಿ ಅವರನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಪಿ.ಕೆ.ಕಮ್ಮಾರ ಅಧ್ಯಕ್ಷತೆ ವಹಿಸಿದ್ದರು, ಬಸನಗೌಡ.ಚ. ಕರೆಹೊಳಲಪ್ಪನವರ, ಬಸವರಾಜ ಗೋವಿಂದಪ್ಪನವರ, ಬಸವರಾಜ ಮತ್ತೂರ, ಶೋಭಾ ಮಂಡಕ್ಕಿ, ನಾಗರಾಜ ಮುಂಡರಗಿ, ಗಜಾನನ ಕುಂದಗೋಳ, ಪ್ರೌಢವಿಭಾಗದ ಮುಖ್ಯಶಿಕ್ಷಕಿ ಮಹಾಂತೇಶ ರಟಗೇರಿ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯಸ್ಥ ಮಂಜುನಾಥ ಹಿರೇಗೌಡ್ರ ಭಾಗವಹಿಸಿದ್ದರು. ವಿದ್ಯಾರ್ಥಿನಿ ಸಂಜನಾ ನೇಮನಗೌಡ್ರ ಹಾಗೂ ಪ್ರತಿ಼ಷ್ಠಾ ಶಿರೂರ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.