ಧಾರವಾಡ: ಪಂ.ಬಸವರಾಜ ರಾಜಗುರು ಟ್ರಸ್ಟ್ ನೀಡುವ ಪಂ.ಬಸವರಾಜ ರಾಜಗುರು ರಾಷ್ಟ್ರೀಯ ಪ್ರಶಸ್ತಿಗೆ ಪುಣೆಯ ಸಂಗೀತ ಕಲಾವಿದ ಪಂ.ಸುಹಾಸ ವ್ಯಾಸ, ರಾಷ್ಟ್ರೀಯ ಯುವ ಪ್ರಶಸ್ತ್ರಿಗೆ ಧಾರವಾಡದ ವಯೋಲಿನ್ ವಾದಕಿ ವೀಣಾ ಮಠ (ದಂಡಾವತಿಮಠ) ಮತ್ತು ರಾಯಚೂರು ಜಿಲ್ಲೆಯ ಮಸ್ಕಿಯ ಹಾರ್ಮೋನಿಯಂ ವಾದಕ ಚಿದಂಬರ ಜೋಶಿ ಆಯ್ಕೆಯಾಗಿದ್ದಾರೆ.
ರಾಷ್ಟ್ರೀಯ ಪುರಸ್ಕಾರವು ₹ 1 ಲಕ್ಷ ನಗದು, ಫಲಕ ಹಾಗೂ ಯುವ ಪ್ರಶಸ್ತಿಯು ತಲಾ ₹ 25 ಸಾವಿರ ನಗದು, ಫಲಕ ಒಳಗೊಂಡಿದೆ. ಆಗಸ್ಟ್ 24 ರಂದು ಬಸವರಾಜ ರಾಜಗುರು ಅವರ 105ನೇ ಜನ್ಮ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.