ADVERTISEMENT

ಹುಬ್ಬಳ್ಳಿ: ಮಾಜಿ ಶಾಸಕ ಹಾಲಹರವಿ ಪುತ್ರ ಸೂರಜ್ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 4:33 IST
Last Updated 8 ಸೆಪ್ಟೆಂಬರ್ 2020, 4:33 IST
ಸೂರಜ್
ಸೂರಜ್    

ಹುಬ್ಬಳ್ಳಿ: ಬಿಜೆಪಿಯ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಅವರ ಪುತ್ರ ಸೂರಜ್ (15) ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೇಶಪಾಂಡೆ ನಗರದಲ್ಲಿರುವ ತಮ್ಮ ಮನೆಯ ಮೇಲಿನ ಕೋಣೆಯಲ್ಲಿ ಸೂರಜ್ ನೇಣು ಹಾಕಿಕೊಂಡಿದ್ದು, ಕಾರಣ ತಿಳಿದು‌ ಬಂದಿಲ್ಲ ಎಂದು
ಉಪನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಕಿಮ್ಸ್ ಶವಾಗಾರಕ್ಕೆ ತರಲಾಗಿದೆ.

ಹಾಲಹರವಿ 2008ರಲ್ಲಿ ಹುಬ್ಬಳ್ಳಿ-ಧಾರವಾಡ ಪೂರ್ವ ಮೀಸಲು ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.