ADVERTISEMENT

ಸ್ವಚ್ಛತೆಯ ಹರಕೆ: ಎಂಎಲ್ಎ, ಜಿಲ್ಲಾಧಿಕಾರಿ ಹಿಡಿದರು‌ ಪೊರಕೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 8:27 IST
Last Updated 22 ಸೆಪ್ಟೆಂಬರ್ 2018, 8:27 IST
   

ಹುಬ್ಬಳ್ಳಿ: ತಾಲ್ಲೂಕಿನ ನೂಲ್ವಿ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಶಾಸಕ ಸಿ.ಎಸ್. ಶಿವಳ್ಳಿ ಶನಿವಾರ ಚಾಲನೆ ನೀಡಿದರು. ಜಿಲ್ಲಾಧಿಕಾರಿ ದೀಪಾ ಚೋಳನ್, ಜಿಲ್ಲಾ ಪಂಚಾಯತಿ ಸಿಇಒ ಸ್ನೇಹಲ್ ಹಾಗೂ ಶಾಸಕರು ಕಸ ಗುಡಿಸುವ ಮೂಲಕ ಊರಿನಲ್ಕಿ ಸ್ವಚ್ಛತೆ ಕಾಪಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಅಪೌಷ್ಟಿಕತೆ ಬಗ್ಗೆಯೂ ಜನರಲ್ಲಿ ಜಾಗೃತಿ‌ ಮೂಡಿಸಲಾಯಿತು.

ಆ ನಂತರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರು ಅಹವಾಲು ಸಲ್ಲಿಸಿದರು.

ADVERTISEMENT

ಶೌಚಾಲಯ ಬೇಕೆಂದು ಡಿಸಿ ಎದುರು ಕಣ್ಣೀರು ಹಾಕಿದ ಯುವತಿ

ಹುಬ್ಬಳ್ಳಿ: ಶೌಚಾಲಯ ನಿರ್ಮಿಸಿಕೊಡುವಂತೆ ನೂಲ್ವಿ ಗ್ರಾಮದ ಯುವತಿಯೊಬ್ಬರು ಜಿಲ್ಲಾಧಿಕಾರಿ ಎದುರು ಕಣ್ಣೀರು ಹಾಕಿದರು.

ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಲುಗ್ರಾಮಕ್ಕೆ ಆಗಮಿಸಿದ್ದ ಜಿ ಲ್ಲಾಧಿಕಾರಿ ಅವರು ಮನೆಯ ಮುಂದೆ ನಿಂತಿದ್ದ ಅಶ್ವಿನಿ ಅವರನ್ನು ಮಾತನಾಡಿಸಿದರು. ಆಗ ಶೌಚಾಲಯ ಇಲ್ಲದೆ ತೊಂದರೆ ಅನುಭವಿಸುತ್ತಿರುವ ವಿಷಯ ಹೇಳಿ ಕಣ್ಣೀರು ಹಾಕಿದರು. ಶೌಚಾಲಯ ನಿರ್ಮಿಸಿ ಕೊಡುವ ಭರವಸೆ ನೀಡಿದರು.

ಅಶ್ವಿನಿ‌ಕುಟುಂಬಕ್ಕೆ ಈಗಾಗಲೇ ಒಂದು ಶೌಚಾಲಯ ಮಂಜೂರು ಮಾಡಲಾಗಿದೆ. ಹೊಅ ಮನೆಯಲ್ಲಿ ಅದನ್ನು ನಿರ್ಮಿಸಲಾಗಿದೆ. ಆದರೆ ಅವರು ತೀರಿ ಹೋದ ನಂತರ ಕುಟುಂಬ ಹಳೆಯ ಮನೆಯಲ್ಲಿ ವಾಸಬಿದೆ. ಅಲ್ಲಿ ಶೌಚಾಲಯ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.

ಇದನ್ನು ಓದಿ....

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.