ADVERTISEMENT

ಧಾರವಾಡ: 1.25 ಕಿ.ಮೀ. ಉದ್ದದ ಗೂಡ್ಸ್ ರೈಲು

ಹೊಸಪೇಟೆಯಿಂದ ತಿನೈ‌ ಘಾಟ್‌ಗೆ ಮೊದಲ ಸಂಚಾರ

​ಪ್ರಜಾವಾಣಿ ವಾರ್ತೆ
Published 20 ಜುಲೈ 2020, 13:52 IST
Last Updated 20 ಜುಲೈ 2020, 13:52 IST
ಹೊಸಪೇಟೆ– ತಿನೈ‌ ಘಾಟ್ ಮಧ್ಯೆ ಯಶಸ್ವಿಯಾಗಿ ಸಂಚರಿಸಿದ ನೈರುತ್ಯ ರೈಲ್ವೆಯ 1.25 ಕಿ.ಮೀ. ಉದ್ದದ ಗೂಡ್ಸ್ ರೈಲು
ಹೊಸಪೇಟೆ– ತಿನೈ‌ ಘಾಟ್ ಮಧ್ಯೆ ಯಶಸ್ವಿಯಾಗಿ ಸಂಚರಿಸಿದ ನೈರುತ್ಯ ರೈಲ್ವೆಯ 1.25 ಕಿ.ಮೀ. ಉದ್ದದ ಗೂಡ್ಸ್ ರೈಲು   

ಹುಬ್ಬಳ್ಳಿ: ನೈರುತ್ಯ ರೈಲ್ವೆಯ 1.25 ಕಿಲೋಮೀಟರ್ ಉದ್ದದ ಗೂಡ್ಸ್ ರೈಲು ಮೊದಲ ಬಾರಿಗೆ ಹೊಸಪೇಟೆಯಿಂದ ತಿನೈ‌ ಘಾಟ್‌ವರೆಗೆ ಯಶಸ್ವಿಯಾಗಿ ಸಂಚಾರ ನಡೆಸಿ, ಹೊಸ ದಾಖಲೆ ಬರೆಯಿತು. ಹೊಸಪೇಟೆಯಿಂದ ಜುಲೈ 19ರಂದು ಮಧ್ಯಾಹ್ನ 2.35ಕ್ಕೆ ಹೊರಟ ರೈಲು, ಸಂಜೆ 5.25ಕ್ಕೆ ತಿನೈ ಘಾಟ್ ತಲುಪಿತು. 250 ಕಿ.ಮೀ. ದೂರವನ್ನು ಪ್ರತಿ ಗಂಟೆಗೆ 56 ಕಿ.ಮೀ. ವೇಗದಲ್ಲಿ 4 ಗಂಟೆ 50 ನಿಮಿಷದಲ್ಲಿ ಕ್ರಮಿಸಿತು.

ಗೂಡ್ಸ್ ರೈಲುಗಳು ಸಾಮಾನ್ಯವಾಗಿ 59 ಬೋಗಿಗಳನ್ನು ಒಳಗೊಂಡಿರುತ್ತವೆ. ಆದರೆ, ಎರಡು ಗೂಡ್ಸ್‌ಗಳ ಉದ್ದಕ್ಕೆ ಸಮವಾಗಿರುವ ಈ ರೈಲು 117 ಬೋಗಿ, 2 ಬ್ರೇಕ್‌ ವ್ಯಾನ್ ಹಾಗೂ ನಾಲ್ಕು ಲೋಕೊಮೋಟಿವ್ ಎಂಜಿನ್‌ (2 ಮುಂದೆ ಮತ್ತು 2 ಮಧ್ಯ ಭಾಗದಲ್ಲಿ) ಒಳಗೊಂಡಿತ್ತು

‘ಅತಿ ಉದ್ದವಾದ ರೈಲಿನ ಕಾರ್ಯಾಚರಣೆಯು ರೈಲು ಮಾರ್ಗಗಳಲ್ಲಿನ ದಟ್ಟಣೆ ತಗ್ಗಿಸಿ, ರೈಲುಗಳ ವೇಗವನ್ನು ಹೆಚ್ಚಿಸಲು ನೆರವಾಗಲಿದೆ. ಲೋಡಿಂಗ್ ಮತ್ತು ಅನ್‌ಲೋಡಿಂಗ್ ಪಾಯಿಂಟ್‌ಗಳಲ್ಲಿ ಸರಕು ಸಾಗಣೆಯ ಸಾಮರ್ಥ್ಯ ಹೆಚ್ಚಿಸಲಿದೆ’ ಎಂದು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಎ.ಜಿ. ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.