
ಧಾರವಾಡ: ಬೆಂಗಳೂರಿನ ಸಂಜಯ್ ಮಾಧವನ್, ಸಹನಾ ಎಚ್.ಮೂರ್ತಿ ಅವರು ಭಾನುವಾರ ಮುಕ್ತಾಯವಾದ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ, ಮಹಿಳಾ ವಿಭಾಗದ ಸಿಂಗಲ್‌ನಲ್ಲಿ ಪ್ರಶಸ್ತಿ ಗೆದ್ದರು.
ಕಾಸ್ಮೋಸ್ ಕ್ಲಬ್ ಆಯೋಜಿಸಿದ್ದ ಟೂರ್ನಿಯ ಪುರುಷರ ವಿಭಾಗದ ಫೈನಲ್‌ನಲ್ಲಿ ಸಂಜಯ್ 11-4, 11-9, 6-11, 11-6, 11-9 ರಿಂದ ಬೆಂಗಳೂರಿನ ಯಶವಂತ್ ಪಿ., ಅವರನ್ನು ಸೋಲಿಸಿದರು.
ಸೆಮಿಫೈನಲ್ಸ್‌ನಲ್ಲಿ ಸಂಜಯ್ 4-11, 11-8, 11-8, 7-11, 11-1, 4-11, 11-8 ರಿಂದ ಬೆಂಗಳೂರಿನ ವರುಣ್ ಬಿ.ಕಶ್ಯಪ್ ಎದುರು; ಯಶವಂತ್ ಪಿ., 9-11, 11-8, 10-12, 11-9, 11-6, 11-5 ರಿಂದ ಧಾರವಾಡದ ಸಮರ್ಥ್ ಕುರ್ಡಿಕೇರಿ ವಿರುದ್ಧ ಜಯ ಸಾಧಿಸಿದ್ದರು.
ಮಹಿಳಾ ವಿಭಾಗದ ಫೈನಲ್‌ನಲ್ಲಿ ಸಹನಾ ಮೂರ್ತಿ 4-11, 4-11, 12-10, 11-6, 11-6, 5-11, 11-4ರಿಂದ ಬೆಂಗಳೂರಿನ ವೇದಲಕ್ಷ್ಮಿ ಡಿ.ಕೆ., ಅವರನ್ನು ಸೋಲಿಸಿದರು.
ಸೆಮಿಫೈನಲ್ಸ್‌ನಲ್ಲಿ ವೇದಲಕ್ಷ್ಮಿ ಡಿ.ಕೆ 11-7, 11-9, 11-5, 3-11, 3-11, 11-8 ರಿಂದ ಬೆಂಗಳೂರಿನ ತೃಪ್ತಿ ಪುರೋಹಿತ್ ವಿರುದ್ಧ; ಸಹನಾ ಮೂರ್ತಿ 11-4, 11-5, 11-8, 10-12, 11-6 ರಿಂದ ಬೆಂಗಳೂರಿನ ಕರುಣಾ ಜಿ., ಎದುರು ಜಯಿಸಿದ್ದರು.
19 ವರ್ಷದೊಳಗಿನ ಬಾಲಕರ ವಿಭಾಗದ ಸಿಂಗಲ್ಸ್‌ನಲ್ಲಿ ಬೆಂಗಳೂರಿನ ವರುಣ್ ಬಿ.ಕಶ್ಯಪ್ ಪ್ರಶಸ್ತಿ ಗೆದ್ದರು. ಫೈನಲ್‌ನಲ್ಲಿ ವರುಣ್ 11-9, 7-11, 11-8, 11-5, 16-14 ರಿಂದ ಬೆಂಗಳೂರಿನ ಅರ್ನವ್ ಎನ್., ಅವರನ್ನು ಸೋಲಿಸಿದರು.
ಸೆಮಿಫೈನಲ್‌ನಲ್ಲಿ ವರುಣ್ 16-18, 11-7, 4-11, 11-8, 12-10 ರಿಂದ ಬೆಂಗಳೂರಿನ ಆರ್ಯ ಎ.ಜೈನ್ ವಿರುದ್ಧ; ಅರ್ನವ್ ಎನ್., 9-11, 11-8, 11-9, 11-8 ರಿಂದ ಹೃಷಿಕೇಶ್ ಎ.ಆರ್.ಸೆಟ್ಲೂರ್ ವಿರುದ್ಧ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.