ADVERTISEMENT

ಹುಬ್ಬಳ್ಳಿ | ಮೂಕಪ್ಪಜ್ಜ ಎತ್ತು ಮೃತ; ನೊಂದ ಭಕ್ತರು

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 6:33 IST
Last Updated 31 ಅಕ್ಟೋಬರ್ 2025, 6:33 IST
ಮೂಕಪ್ಪಜ್ಜ ಎತ್ತು
ಮೂಕಪ್ಪಜ್ಜ ಎತ್ತು   

ಹುಬ್ಬಳ್ಳಿ: ನಗರದ ಗೋಕುಲ ಗ್ರಾಮದ ಧಾರಾವತಿ ಆಂಜನೇಯ ದೇವಸ್ಥಾನದಲ್ಲಿ ಭಕ್ತರ ಆರಾಧ್ಯವಾಗಿದ್ದ ಮೂಕಪ್ಪಜ್ಜ ಎತ್ತು ಗುರುವಾರ ಮೃತಪಟ್ಟಿದೆ. ಭಕ್ತರು ಕಂಬನಿ ಮಿಡಿಯುತ್ತ ಧಾರ್ಮಿಕ ವಿಧಿ–ವಿಧಾನದ ಮೂಲಕ ದೇವಸ್ಥಾನದ ಆವರಣದಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು. ಹುಬ್ಬಳ್ಳಿ–ಧಾರವಾಡ ಭಾಗದ ಭಕ್ತರಷ್ಟೇ ಅಲ್ಲದೆ, ಉತ್ತರ ಕರ್ನಾಟಕ ಭಾಗದ ವಿವಿಧೆಡೆಯಿಂದ ಭಕ್ತರು ಬಂದು ಮೂಕಪ್ಪಜ್ಜ ಎತ್ತಿನ ಆಶೀರ್ವಾದ ಪಡೆಯುತ್ತಿದ್ದರು.

‘ಕೆಲ ವರ್ಷಗಳ ಹಿಂದೆ ದೇವಸ್ಥಾನಕ್ಕೆ ಭಕ್ತರೊಬ್ಬರು ಎತ್ತು ಬಿಟ್ಟು ಹೋಗಿದ್ದರು. ಮೂಕ ಸನ್ನೆಯಲ್ಲೇ ಆಶೀರ್ವಾದ ಮಾಡುತ್ತಿದ್ದರಿಂದ ಅದಕ್ಕೆ ಮೂಕಪ್ಪಜ್ಜ ಎಂದು ಹೆಸರು ಇಡಲಾಗಿತ್ತು. ಶನಿವಾರ ದೇವಸ್ಥಾನಕ್ಕೆ ಬರುವ ಭಕ್ತರು, ಆಶೀರ್ವಾದ ಪಡೆಯುತ್ತಿದ್ದರು’ ಎಂದು ಎತ್ತಿನ ಆರೈಕೆ ಮಾಡುತ್ತಿದ್ದ ನಾಗಪ್ಪ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT