ADVERTISEMENT

ಶೆಟ್ಟರ್‌ ಪಕ್ಷ ತೊರೆದದ್ದು ಖೇದಕರ: ಮಹೇಶ ಟೆಂಗಿನಕಾಯಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2023, 6:19 IST
Last Updated 27 ಏಪ್ರಿಲ್ 2023, 6:19 IST
ಜಗದೀಶ ಶೆಟ್ಟರ್ ಮತ್ತು ಮಹೇಶ ಟೆಂಗಿನಕಾಯಿ ಟೆಂಗಿನಕಾಯಿ
ಜಗದೀಶ ಶೆಟ್ಟರ್ ಮತ್ತು ಮಹೇಶ ಟೆಂಗಿನಕಾಯಿ ಟೆಂಗಿನಕಾಯಿ   

ಹುಬ್ಬಳ್ಳಿ: ‘ಜಗದೀಶ ಶೆಟ್ಟರ್‌ ಪಕ್ಷದಲ್ಲಿ ಎಲ್ಲ ಸೌಲಭ್ಯಗಳನ್ನು ಅನುಭವಿಸಿಯೂ ಪಕ್ಷ ತೊರೆದು ಹೋಗಿದ್ದು ಖೇದಕರ. ದ್ರೋಹ ಬಗೆದು ಹೋದ ಅವರು ಚುನಾವಣೆಯಲ್ಲಿ ಸೋಲು ಅನುಭವಿಸಿ ಮೂತಿ ನೋಡಿಕೊಳ್ಳುವಂತಾಗಬೇಕು’ ಎಂದು ಹು–ಧಾ ಸೆಂಟ್ರಲ್‌ ಕ್ಷೇತ್ರದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಹೇಳಿದರು.

ಇಲ್ಲಿನ ಲಿಂಗರಾಜ ನಗರದ ಸಾಂಸ್ಕೃತಿಕ‌ ಸಭಾಭವನದಲ್ಲಿ ಬುಧವಾರ ಬಿಜೆಪಿ ಹಮ್ಮಿಕೊಂಡಿದ್ದ ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಚುನಾವಣೆ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

‘ಕೋವಿಡ್‌ ಸಂದರ್ಭದಲ್ಲಿ ಬಿಜೆಪಿ ಡಬಲ್‌ ಎಂಜಿನ್‌ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡು,ಅಗತ್ಯ ಸೌಲಭ್ಯವನ್ನು ಕಲ್ಪಿಸಿತ್ತು. ಜನಪರವಾದ ಆಡಳಿತ ನೀಡಿದ ಬಿಜೆಪಿ ಮುಂದಿನ ಬಾರಿಯೂ ಸರ್ಕಾರ ನಡೆಸುವಂತಾಗಬೇಕು.  ನಾನು ಶಾಸಕನಾಗಿ ಅಲ್ಲ, ಸೇವಕನಾಗಿ ಕೆಲಸ ಮಾಡುತ್ತೇನೆ. ಮುಂದಿನ ಐದು ವರ್ಷಗಳಲ್ಲಿ ಟಾಪ್ 10 ಸಿಟಿಯಲ್ಲಿ ಹುಬ್ಬಳ್ಳಿ ಸೇರಿಸುವುದೇ ನನ್ನ ಧ್ಯೇಯ’ ಎಂದರು.

ADVERTISEMENT

ಸೆಂಟ್ರಲ್ ಕ್ಷೇತ್ರದ ಚುನಾವಣಾ ಉಸ್ತುವಾರಿ ಪ್ರೇಮರಂಜ‌ನ ಪಟೇಲ್, ಪಾಂಡುರಂಗ ಪಾಟೀಲ, ವಿಜಯಾನಂದ ಹೊಸಕೋಟೆ, ಡಾ. ಮಹೇಶ ನಾಲವಾಡ, ರಮೇಶ ಪಾಟೀಲ, ರೂಪಾ ಶೆಟ್ಟಿ, ರಾಜಣ್ಣ‌ ಕೊರವಿ, ಕಿಶನ್ ಬೆಳಗಾವಿ, ತಿಪ್ಪಣ್ಣ ಮಜ್ಜಗಿ, ಸಂತೋಷ ಚವ್ಹಾಣ, ಉಮೇಶ ಕೌಜಗೇರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.