ADVERTISEMENT

ಜಿಗಳಿ ಕೆರೆ ಒಡ್ದು ಒಡೆದು ಅಪಾರ ಹಾನಿ 

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 16:42 IST
Last Updated 18 ಜೂನ್ 2021, 16:42 IST
ಕಲಘಟಗಿ ತಾಲ್ಲೂಕಿನ ಹಟಕಿನಾಳ ಗ್ರಾಮದ ಜಿಗಳಿ ಕೆರೆ ಒಡ್ದು ಒಡೆದು ನೀರು ಹೊಲಗಳಿಗೆ ನುಗ್ಗಿರುವುದು
ಕಲಘಟಗಿ ತಾಲ್ಲೂಕಿನ ಹಟಕಿನಾಳ ಗ್ರಾಮದ ಜಿಗಳಿ ಕೆರೆ ಒಡ್ದು ಒಡೆದು ನೀರು ಹೊಲಗಳಿಗೆ ನುಗ್ಗಿರುವುದು   

ಕಲಘಟಗಿ: ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ತಾಲ್ಲೂಕಿನ ಹಟಕಿನಾಳ ಗ್ರಾಮದ ಜಿಗಳಿ ಕೆರೆ ಒಡ್ದು ಒಡೆದು ಕೆರೆಯ ನೀರು ರೈತರ ಜಮೀನುಗಳಿಗೆ ನುಗ್ಗಿ ಅಪಾರ ಹಾನಿ ಸಂಭವಿಸಿದೆ.

ಕೆರೆಯಲ್ಲಿ ಹೆಚ್ಚಿನ ಪ್ರಮಾಣದ ನೀರು ಶೇಖರಣೆ ಆಗಿದ್ದರಿಂದ ಶುಕ್ರವಾರ ಕೆರೆಯ ಒಡ್ದು ಒಡೆದಿದೆ. ನೀರಿನ ರಭಸಕ್ಕೆ ಬೆಳೆಗಳು ಕೊಚ್ಚಿ ಹೋಗಿವೆ.ತಾಲ್ಲೂಕು ಆಡಳಿತದ ಅಧಿಕಾರಿಗಳು ಸ್ಥಳ ಪರಿಶೀಲಿಸಿರೈತರಿಗೆ ಪರಿಹಾರ ನೀಡಬೇಕೆಂದು ಹಟಕಿನಾಳ ಗ್ರಾಮದ ರೈತರಾದ ಮಲ್ಲಯ್ಯ ಗೋಡಿನಮನಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕೆಲ ಹೊತ್ತಿನ ಬಳಿಕಸ್ಥಳಕ್ಕೆ ದೌಡಾಯಿಸಿದ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಕೆರೆಯ ಒಡ್ದು ಒಡೆದು ರೈತರ ಬೆಳೆ ಹಾನಿಯಾದ ಕುರಿತು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.

ADVERTISEMENT

ತಾಲ್ಲೂಕಿನಲ್ಲಿ ಬಿಟ್ಟು ಬಿಡದೆ ಮಳೆಸುರಿಯುತ್ತಿರುವ ಕಾರಣ ಹೊಲದಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತುಮೊಳಕೆ ಒಡೆದ ಬೀಜಗಳು ಭೂಮಿಯಿಂದ ಮೇಲಕ್ಕೆ ಬಾರದೆ ಕೂಡ ಹಾನಿ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.