ADVERTISEMENT

ಅಭಿವ್ಯಕ್ತಿಗೊಂಡ ಅವಿಭಕ್ತ ಕುಟುಂಬದ ಕಲ್ಪನೆ

ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್ ಆಯೋಜಿಸಿದ್ದ ಚಿತ್ರಕಲೆ, ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 9:56 IST
Last Updated 6 ಜೂನ್ 2020, 9:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಧಾರವಾಡ: ಕೋವಿಡ್–19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಲ್ಲಿದ್ದ ಲಾಕ್‌ಡೌನ್ ಅವಧಿಯಲ್ಲಿ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಚಿತ್ರಕಲೆ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಅವಿಭಕ್ತ ಕುಟುಂಬದ ಕಲ್ಪನೆಯನ್ನು ಬಹುಪಾಲು ವಿದ್ಯಾರ್ಥಿಗಳು ಅಭಿವ್ಯಕ್ತಿಗೊಳಿಸಿದ್ದಾರೆ.

ಅಖಿಲ ಭಾರತ ಪ್ರಾಥಮಿಕ ಶಿಕ್ಷಕರ ಫೆಡರೇಷನ್‌ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಆನ್‌ಲೈನ್ ಮೂಲಕ 5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. 5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ‘ಕೊರೊನಾ ಗೆಲ್ಲೋಣ’ ಎಂಬ ಚಿತ್ರಕಲಾ ಸ್ಪರ್ಧೆಯನ್ನೂ ಮತ್ತು 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ‘ಕೊರೊನಾ ನಂತರದ ಜೀವನ’ ವಿಷಯ ಕುರಿತ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇದರಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಕೂಡುಕುಟುಂಬದ ಪರಿಕಲ್ಪನೆಯನ್ನು ಚಿತ್ರ ಹಾಗೂ ಅಕ್ಷರಗಳ ಮೂಲಕ ದಾಖಲಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಫೆಡರೇಷನ್ ಉಪಾಧ್ಯಕ್ಷ ಬಸವರಾಜ ಗುರಿಕಾರ, ‘ಬೆಳಗಾವಿ ವಿಭಾಗದ ಮಟ್ಟದ ಶೈಕ್ಷಣಿಕ ಜಿಲ್ಲೆಗಳ ಮಕ್ಕಳಿಗೆ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಇಮೇಲ್ ಹಾಗೂ ವಾಟ್ಸ್ಆ್ಯಪ್ ಮೂಲಕ ಪ್ರವೇಶ ಕಳುಹಿಸುವಂತೆ ಹೇಳಲಾಗಿತ್ತು. ಸುಮಾರು 600ಕ್ಕೂ ಅಧಿಕ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಉನ್ನತ ತಜ್ಞರ ಸಮಿತಿ ರಚಿಸಿ, ಅತ್ಯುತ್ತಮವಾದುದ್ದನ್ನು ಆರಿಸಿ ಬಹುಮಾನ ಘೋಷಿಸಲಾಗಿದೆ’ ಎಂದರು.

ADVERTISEMENT

‘ಚಿತ್ರಕಲಾ ಸ್ಪರ್ಧೆಯಲ್ಲಿ 236 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಬಂಧ ಸ್ಪರ್ಧೆಯಲ್ಲಿ 234 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇಂಗ್ಲಿಷ್ ಮಾಧ್ಯಮದ 30 ವಿದ್ಯಾರ್ಥಿಗಳು ಹಾಗೂ ಉರ್ದು ಮಾಧ್ಯಮದ 5 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇವುಗಳನ್ನು ಪರಿಗಣಿಸಿ ಬಹುಮಾನಗಳನ್ನು ಘೋಷಿಸಲಾಗಿದೆ. ಬೆಳಗಾವಿ ವಿಭಾಗ ಮಟ್ಟದ ವಿಜೇತರ ಜತೆಗೆ ಆಯಾ ಜಿಲ್ಲೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಗುರುತಿಸಿ ನಗದು ಪುರಸ್ಕಾರ, ಪ್ರಮಾಣ ಪತ್ರವನ್ನು ನೀಡಲಾಗುವುದು. ಪಾಲ್ಗೊಂಡ ಪ್ರತಿಯೊಬ್ಬರಿಗೂ ಪ್ರಮಾಣ ಪತ್ರವನ್ನು ನೀಡಲಾಗುವುದು. ನಗದು ಪುರಸ್ಕಾರವನ್ನು ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಹಾಕಲಾಗುವುದು. ಪ್ರಮಾಣಪತ್ರವನ್ನು ಅಂಚೆ ಮೂಲಕ ಕಳುಹಿಸಲಾಗುವುದು’ ಎಂದರು.

‘ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳ ಕಲ್ಪನೆ ಊಹೆಗೂ ಮೀರಿದ್ದು. ಇಂಥದ್ದೊಂದು ಉತ್ತಮ ವೇದಿಕೆ ಮೂಲಕ ಅವರ ಪ್ರತಿಭೆಯ ಅನಾವರಣವಾಗಿದೆ. ಸಂಘಗಳು ಕೇವಲ ಶಿಕ್ಷಕರ ಹಕ್ಕುಗಳ ಹೋರಾಟಕ್ಕೆ ಮಾತ್ರವಲ್ಲದೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೂ ಒತ್ತು ನೀಡುತ್ತಿದೆ. ಹೀಗಾಗಿ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳ ಚಿತ್ರ ಹಾಗೂ ಪ್ರಬಂಧಗಳನ್ನು ಪುಸ್ತಕರೂಪದಲ್ಲಿ ಹೊರತರುವ ಯೋಜನೆಯೂ ಇದೆ’ ಎಂದು ಗುರಿಕಾರ ತಿಳಿಸಿದರು.

‘ಕೋವಿಡ್–19 ಸೋಂಕು ದಿನದಿಂದ ದಿನಕ್ಕೆ ಹೆಚ್ಚು ವ್ಯಾಪಿಸುತ್ತಿದೆ. ಇಂಥ ಸಂದರ್ಭದಲ್ಲಿ ಶಾಲೆ ಆರಂಭಿಸುವ ಸರ್ಕಾರದ ತರಾತುರಿ ಆತಂಕ ಮೂಡಿಸುವಂತಿದೆ. ಶಾಲೆ ಆರಂಭವಾಗುವ ದಿನಾಂಕ ಇನ್ನೂ ಅಂತಿಮಗೊಳ್ಳದಿದ್ದರೂ, ಶಿಕ್ಷಕರನ್ನು ಶಾಲೆಗಳಿಗೆ ಕರೆಯಿಸಿರುವುದು ಎಳ್ಳಷ್ಟೂ ಸರಿಯಲ್ಲ. ಹಾಗೆಯೇ ಆನ್‌ಲೈನ್‌ ತರಗತಿ ಪದ್ಧತಿಯನ್ನೂ ಕೆಲ ಖಾಸಗಿ ಶಾಲೆಗಳು ಅಳವಡಿಸಿಕೊಂಡಿದ್ದು ಇದನ್ನು ಕೂಡಲೇ ರದ್ಧುಪಡಿಸಿ, ಓಣಿ ಶಾಲೆಗಳನ್ನು ಆರಂಭಿಸಬೇಕು’ ಎಂದು ಒತ್ತಾಯಿಸಿದರು.

***

ವಿಜೇತರ ವಿವರ

ಚಿತ್ರಕಲಾ ಸ್ಪರ್ಧೆ ವಿಜೇತರು:

ವಿಭಾಗ ಮಟ್ಟ: ಧಾರವಾಡ ಜಿಲ್ಲೆಯ ನಾಗರಾಜ ವಿ. ಕುಡಾಲ್ಕರ್– ಪ್ರಥಮ (₹7500), ಶಿರಸಿ ಜಿಲ್ಲೆಯ ಎಂ.ವಿ.ಶ್ರೇಯಾ– ದ್ವಿತೀಯ (₹5000), ಹಾವೇರಿ ಜಿಲ್ಲೆಯ ಶ್ರಾವಣಿ ಎಂ. ಆಚಾರ್ಯ– ತೃತೀಯ (₹2500) ಹಾಗೂ ಧಾರವಾಡ ಜಿಲ್ಲೆಯ ಶ್ರದ್ಧಾ ಎಸ್.ಹಿರೇಮಠ– ಸಮಾಧಾನಕರ (₹1000).

ಧಾರವಾಡ ಜಿಲ್ಲೆ: ಪ್ರಜ್ಞಾ ಎಸ್.ಶೆಟ್ಟಿ (ಪ್ರಥಮ), ಸುಖದಾ ಎಸ್. ಮುರಗೋಡ (ದ್ವಿತೀಯ), ಅನುಷಾ ಬೆನಗೇರಿ (ತೃತೀಯ).

ಹಾವೇರಿ: ಅರ್ಜುನಕುಮಾರ ಎ. ಶೆಟ್ಟಿಕೇರಿ (ಪ್ರಥಮ), ತನುಶ್ರೀ ಎಂ. ನಾಯಕ (ದ್ವಿತೀಯ), ಪಾರ್ವತಿ ಎಸ್. ಅಗಸನಹಳ್ಳಿ (ತೃತೀಯ).

ಬೆಳಗಾವಿ: ಅಭಿಮಾನ ಶೆಟ್ಟಿ (ಪ್ರಥಮ), ಮೀಸ್ ಮುನೋಲಿ (ದ್ವಿತೀಯ), ವಿನಯ ಬಮ್ಮನವಾಡಿ (ತೃತೀಯ)

ಬಾಗಲಕೋಟೆ: ಶ್ರೇಯಾ ನಲವಡೆ (ಪ್ರಥಮ), ರಘುನಂದ ಹಿರೇಮಠ (ದ್ವಿತೀಯ), ಸೃಷ್ಟಿ ಯಾದವ (ತೃತೀಯ).

ಚಿಕ್ಕೋಡಿ: ತುಷಾರ್ ಆರ್. ಮುಸಂಡಿ (ಪ್ರಥಮ), ದೀಪಾ ಶಿರಗಾಂವಕರ (ದ್ವಿತೀಯ), ಅಂಜಲಿ ಮುರಗಲಿ (ತೃತೀಯ),

ಕಾರವಾಡ: ಅಂಬಿಕಾ ಎಸ್. ಗುಮಾಗ (ಪ್ರಥಮ), ಸವಾತಿಕ ಎಸ್.ಸರೂರ (ದ್ವಿತೀಯ), ತಾಕರೇಲ್ ಡಿ. ಶೆಟ್ಟಿ (ತೃತೀಯ).

ವಿಜಯಪುರ: ಅಂಕಿತಾ ಮನಗೂಳಿ (ಪ್ರಥಮ), ಶ್ರೀಗೌರಿ ಹೆಬ್ಬಾಳ (ದ್ವಿತೀಯ), ಪ್ರಧಾನ ಹುದ್ದಾರ (ತೃತೀಯ)

ಗದಗ: ಭಾವನಾ ಇ. ಜಂಗಲಿ (ಪ್ರಥಮ), ಅನುಷಾ ಎನ್. ಭಜಂತ್ರಿ (ದ್ವಿತೀಯ), ಶಶಾಂಕ ಮ. ಬನ್ನಿಕೊಪ್ಪ (ತೃತೀಯ).

ಶಿರಸಿ: ಪವಿತ್ರಾ ಹೆಗಡೆ (ಪ್ರಥಮ).

ಪ್ರಬಂಧ ಸ್ಪರ್ಧೆಯ ವಿಜೇತರು:

ವಿಭಾಗ ಮಟ್ಟ: ಬೆಳಗಾವಿ ಜಿಲ್ಲೆಯ ವಿಘ್ನೇಶ ಕಾಮತ್– ಪ್ರಥಮ, ಕಾರವಾರ ಜಿಲ್ಲೆಯ ಹರ್ಷಿತಾ ನಾಯ್ಕ್– ದ್ವಿತೀಯ, ಹಾವೇರಿ ಜಿಲ್ಲೆಯ ಚಿನ್ಮಯ ಇಸರಣ್ಣವರ (ತೃತೀಯ).

ಧಾರವಾಡ ಜಿಲ್ಲೆ: ಪ್ರಾರ್ಥನಾ ಚಿಕ್ಕಲಕರ್ (ಪ್ರಥಮ), ತೇಜಸ್ ಹತ್ತಿ (ದ್ವಿತೀಯ), ನಾಗರಾಜ ಮಡಿವಾಳರ (ತೃತೀಯ).

ಹಾವೇರಿ: ಪಿ. ಕೀರ್ತನಾ (ಪ್ರಥಮ), ಮುಪ್ಪಣ್ಣ ಡಮ್ಮಳ್ಳಿ (ದ್ವಿತೀಯ), ಶಂಬು ತಡಸದ್ (ತೃತೀಯ).

ಬೆಳಗಾವಿ: ಕಾವ್ಯ ಅಂಗಡಿ (ಪ್ರಥಮ), ಸ್ನೇಹಾ ಬಾಲರಡ್ಡಿ (ದ್ವಿತೀಯ), ವಿದ್ಯಾಶ್ರೀ ಎಂ. ಖೋತ (ತೃತೀಯ)

ಬಾಗಲಕೋಟೆ: ಗೌರಿ ಹೊಂಗಲ (ಪ್ರಥಮ), ಸೃಷ್ಟಿ ಹಂಚಿನಮನಿ (ದ್ವಿತೀಯ), ಯುಕ್ತಾ ಅಳ್ಳಿಮಟ್ಟಿ (ತೃತೀಯ)

ಚಿಕ್ಕೋಡಿ: ಖುಷಿ ಭೋಸಲೆ (ಪ್ರಥಮ), ರೋಹನ ಹನಗಂಡಿ (ದ್ವಿತೀಯ), ಐಶ್ವರ್ಯಾ ಅದಿಪವಾಡೆ (ತೃತೀಯ)

ಕಾರವಾರ: ಅರ್ಪಿತಾ ಅಶೋಕಗೌಡ (ಪ್ರಥಮ), ಲಕ್ಷ್ಮೀ ವೆಂ. ನಾಯಕ (ದ್ವಿತೀಯ), ಸೃಜನಾ ಲೋ. ಕೊಠಾರಿ (ತೃತೀಯ)

ವಿಜಯಪುರ: ವಿದ್ಯಾ ಮಲ್ಲಪ್ಪ ಮೆಂಡೆಗಾರ (ಪ್ರಥಮ), ಅಂಬಣ್ಣ ಬಡಿಗೇರ (ದ್ವಿತೀಯ), ಸಾಯಿಕಿರಣ ಕನಕರೆಡ್ಡಿ (ತೃತೀಯ)

ಗದಗ: ಗದಿಗೆಮ್ಮ ಮ. ನೀಲಗುಂದ (ಪ್ರಥಮ), ಶ್ರೇಯಾ ಜೋಶಿ (ದ್ವಿತೀಯ), ಎಚ್.ಎಚ್.ಪ್ರಕೃತಿ (ತೃತೀಯ)

ಶಿರಸಿ: ರಮ್ಯಾಕಿರಣ ಬರಡೂರ

ಇಂಗ್ಲಿಷ್ ಮಾಧ್ಯಮ: ಬೆಳಗಾವಿಯ ರಹುಲ್ ರಾಠೋಡ (ಪ್ರಥಮ), ಗದುಗಿನ ಶ್ರೇಯಾ ಹೊನಗಣ್ಣವರ (ದ್ವಿತೀಯ), ಧಾರವಾಡದ ಸಹನಾ ಶೇಠ (ತೃತೀಯ)

ಉರ್ದು ಮಾಧ್ಯಮ: ಚಿಕ್ಕೋಡಿಯ ನಮೀರಾ ನಸರದಿ (ಪ್ರಥಮ), ಬೆಳಗಾವಿಯ ಉಮ್ಮೇಹಬೀಬಾ ಮುತ್ತನಳ್ಳಿ (ದ್ವಿತೀಯ) ಹಾಗೂ ಇದೇ ಜಿಲ್ಲೆಯ ರಿಜವಾನಾ ಮುಲ್ಲಾ (ತೃತೀಯ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.