ಉಪ್ಪಿನಬೆಟಗೇರಿ: ಸಮೀಪದ ಕಲ್ಲೂರ ಗ್ರಾಮದ ಜೈಲಾನಿ ಸೈಯ್ಯದನವರ ಎಂಬುವವರ ಮೇಲೆ ಹಲ್ಲೆ ನಡೆಸಿ 15 ಗ್ರಾಂ ಬಂಗಾರದ ಚೈನ್ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದ ಕಳ್ಳರನ್ನು ಗರಗ ಪೋಲಿಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಫೆ.3 ರಂದು ಜೈಲಾನಿ ಅವರು ಕಲ್ಲೂರ– ಕೊಟಬಾಗಿ ರಸ್ತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಆರೋಪಿಗಳು ಅವರನ್ನು ತಡೆದು ಹಲ್ಲೆ ಮಾಡಿ ದರೋಡೆ ಮಾಡಿದ್ದರು. ಕಲ್ಲೂರ ಗ್ರಾಮದ ರವಿ ದಂಡಿನ, ಇಟಿಗಟ್ಟಿ ಗ್ರಾಮದ ಶಂಕರ ಕೊಕಾಟೆ, ಗೋಪನಕೊಪ್ಪ ಗ್ರಾಮದ ದೀಪಕ ಗೊಲ್ಲರ ಬಂಧಿತ ಆರೋಪಿಗಳು.
ಆರೋಪಿಗಳ ಬಳಿಯಿದ್ದ ₹60 ಸಾವಿರ ಮೌಲ್ಯದ ಚಿನ್ನದ ಚೈನು, ₹10 ಸಾವಿರ ಮೌಲ್ಯದ ಮೊಬೈಲ್ ಹಾಗೂ ದರೋಡೆಗೆ ಬಳಸಿದ್ದ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ಧಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.