ಹುಬ್ಬಳ್ಳಿ: ದೂಧಸಾಗರ್ ಮತ್ತು ಕುಲೆಮ್ ರೈಲು ನಿಲ್ದಾಣಗಳ ನಡುವೆ ಸಂಚರಿಸುವ ಸರಕು ಸಾಗಣೆ ರೈಲಿನಲ್ಲಿ ಕೆಲವರು ಅನಧಿಕೃತವಾಗಿ ಪ್ರಯಾಣ ಮಾಡುತ್ತಿರುವ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡಿದೆ. ಇದನ್ನು ನೈರುತ್ಯ ರೈಲ್ವೆಯ ರೈಲ್ವೆ ಸುರಕ್ಷತಾ ಪಡೆ ಗಂಭೀರವಾಗಿ ಪರಿಗಣಿಸಿದ್ದು, ವಿಡಿಯೋ ಚಿತ್ರೀಕರಿಸಿ, ಸಾಮಾಜಿಕ ಮಾಧ್ಯಮದಲ್ಲಿ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಿದೆ.
ದೂಧಸಾಗರ್ ಜಲಪಾತ ಪ್ರದೇಶ ಪ್ರವೇಶ ನಿರ್ಬಂಧಿತವಾಗಿದ್ದರೂ, ಕೆಲ ಪ್ರವಾಸಿಗರು ಸ್ಥಳೀಯ ಏಜೆಂಟರ ಮೂಲಕ ದೂಧಸಾಗರದಿಂದ ಕುಲೆಮ್ ನಿಲ್ದಾಣದವರೆಗೆ ಸರಕು ಸಾಗಣೆ ರೈಲಿನಲ್ಲಿ ಕುಳಿತು ವಿಡಿಯೋ ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಇದು ಅನಧಿಕೃತ ಹಾಗೂ ಅಪಾಯಕಾರಿಯಾಗಿದೆ. ಸರಕು ಸಾಗಣೆ ರೈಲಿನಲ್ಲಿ ಪ್ರಯಾಣ ಮಾಡಲು ನಿರ್ಬಂಧವಿದ್ದು, ಅದು ಶಿಕ್ಷಾರ್ಹವಾಗಿದೆ. ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.