ಹುಬ್ಬಳ್ಳಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಬಜರಂಗದಳದ ಕಾರ್ಯಕರ್ತರಿಗೆ ಆಯುಧಪೂಜೆಯ ಅಂಗವಾಗಿ ತ್ರಿಶೂಲ ದೀಕ್ಷೆ ನೀಡಿದ ಘಟನೆ ಮಾಧ್ಯಮಗಳ ಮೂಲಕ ಬಹಿರಂಗವಾಗಿದ್ದು, ಸರ್ಕಾರ ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಯು.ಟಿ. ಖಾದರ್ ಆಗ್ರಹಿಸಿದರು.
ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ದತೆ ಕಾಪಾಡಬೇಕಾಗಿದ್ದು ಸರ್ಕಾರದ ಕೆಲಸ. ಯಾವ ಕಾರಣಕ್ಕಾಗಿ ತ್ರಿಶೂಲ ದೀಕ್ಷೆ ನೀಡಲಾಗಿದೆ ಎನ್ನುವುದನ್ನು ಪತ್ತೆ ಹಚ್ಚಬೇಕು. ಸತ್ಯ ಬಹಿರಂಗವಾಗಬೇಕು. ಇಲ್ಲವಾದರೆ ಕಾನೂನಿಗೆ ಬಗ್ಗೆ ಜನರಿಗೆ ನಂಬಿಕೆ ಉಳಿಯುವುದಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.