ಉಪ್ಪಿನಬೆಟಗೇರಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಮಂಗಳವಾರ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು
ಉಪ್ಪಿನಬೆಟಗೇರಿ: ಉಪ್ಪಿನಬೆಟಗೇರಿ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಯುವಕ ಮಂಡಳಗಳಿಂದ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಮಂಗಳವಾರ ಅದ್ದೂರಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು.
ಗ್ರಾಮದ ಶ್ರೀಗುರು ವಿರುಪಾಕ್ಷೇಶ್ವರ ದೇವಸ್ಥಾನ, ಆಂಜನೇಯ ದೇವಸ್ಥಾನ ಹಾಗೂ ಹನುಮನಕೊಪ್ಪ ಗ್ರಾಮದ ಕಲ್ಮೇಶ್ವರ ದೇವಸ್ಥಾನ, ಹೊಸಪೇಟಿಮಠ ಓಣಿ ಸೇರಿದಂತೆ ವಿವಿದೆಡೆ ಗಜಾನನ ಯುವಕ ಮಂಡಳದಿಂದ ಪ್ರತಿಷ್ಠಪಿಸಲಾಗಿದ್ದ ಗಣೇಶ ಮೂರ್ತಿಗಳನ್ನು ಪೂಜಿಸಿ, ಟ್ರ‍್ಯಾಕ್ಟರ್‌ನಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ವಿಸರ್ಜನಾ ಮೆರವಣಿಗೆಯು ವಿರಕ್ತಮಠ, ಹೊಸಪೇಟಿಮಠ ಓಣಿ, ಮಾರ್ಕೆಟ್ ರಸ್ತೆ, ಆಂಜನೇಯ ದೇವಸ್ಥಾನ, ಹನುಮನಕೊಪ್ಪ ಹಾಗೂ ಹಳೇ ಬಸ್ ನಿಲ್ಧಾಣದ ಮೂಲಕ ಸಾಗಿತು. ಮೂರ್ತಿಗಳನ್ನು ತುಪ್ಪರಿ ಹಳ್ಳದಲ್ಲಿ ವಿಸರ್ಜಿಸಲಾಯಿತು.
ಡಿ.ಜೆ ಸದ್ದಿಗೆ ಮಕ್ಕಳು, ಯುವಕರು ಕುಣಿದು ಸಂಭ್ರಮಿಸಿದರು. ಕೆಸರಿ ಶಾಲು, ಬಾವುಟಗಳು ರಾರಾಜಿಸಿದವು. ಗಣಪತಿ ಬಪ್ಪ ಮೊರಯಾ ಎಂದು ಜೈಕಾರ ಹಾಕಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಗರಗ ಪೊಲೀಸ್ ಠಾಣೆಯ ಸಿಬ್ಬಂದಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.