
ಉಪ್ಪಿನಬೆಟಗೇರಿ: ಮಹಾಶಿವರಾತ್ರಿ ಅಂಗವಾಗಿ ಇಲ್ಲಿಯ ಮಾರುಕಟ್ಟೆ ರಸ್ತೆಯ ಪರ್ವತ ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾ ಮಹೋತ್ಸವವು ಮಲ್ಲಿಕಾರ್ಜುನಸ್ವಾಮಿ ಮೂರ್ತಿ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಸಂಭ್ರಮದಿಂದ ಸಂಪನ್ನವಾಯಿತು.
ಬೆಳಿಗ್ಗೆ ಶಿವಲಿಂಗದ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸಹಿತ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಅರ್ಚಕರು ನೆರವೇರಿಸಿದರು.
ನಂತರ ಭಜನಾ ಮೇಳದೊಂದಿಗೆ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪ್ರಮುಖರಾದ ಶಿವಪ್ಪ ವಿಜಾಪೂರ, ಮಡಿವಾಳಪ್ಪ ಮಸೂತಿ, ನಾಗಪ್ಪ ಬರಬರಿ. ಆರೂಢ ಆಯಟ್ಟಿ, ಅಶೋಕ ಪಾವಡಿ, ನಾಗಪ್ಪ ಉಡಿಕೇರಿ, ಈರಪ್ಪ ಮಸೂತಿ, ಯಲ್ಲಪ್ಪ ಕಳ್ಳಿ, ಮಹಾರುದ್ರಪ್ಪ ಅಂಬನ್ನವರ, ರುದ್ರಪ್ಪ ಮಸೂತಿ, ಸೋಮಶೇಖರ ಗೋಡಿಕಟ್ಟಿ ಈರಪ್ಪ ಬೆಳವಂಕಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.