ADVERTISEMENT

ಉಪ್ಪಿನಬೆಟಗೇರಿ| ರೇಷ್ಮೆ ಕೃಷಿಗೆ ಆದ್ಯತೆ ನೀಡಿ: ಎಂ.ಎನ್.ಲೋಕೇಶ ಸಲಹೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 3:19 IST
Last Updated 14 ಜನವರಿ 2026, 3:19 IST
ಉಪ್ಪಿನಬೆಟಗೇರಿಯಲ್ಲಿ ರೇಷ್ಮೆ ಕೃಷಿ ಪ್ರಚಾರ ಆಂದೋಲನ, ರಾಯಾಪೂರ ರೇಷ್ಮೆ ತರಬೇತಿ ಸಂಸ್ಥೆ ಮಂಗಳವಾರ ಏರ್ಪಡಿಸಿದ್ದ ಧಾರವಾಡ  ರೇಷ್ಮೆ ಬೆಳೆಗಾರರಿಗೆ ಕ್ಷೇತ್ರಮಟ್ಟ ತರಬೇತಿ ಕಾರ್ಯಕ್ರಮದಲ್ಲಿ ಎಂ.ಎನ್.ಲೋಕೇಶ ಮಾತನಾಡಿದರು 
ಉಪ್ಪಿನಬೆಟಗೇರಿಯಲ್ಲಿ ರೇಷ್ಮೆ ಕೃಷಿ ಪ್ರಚಾರ ಆಂದೋಲನ, ರಾಯಾಪೂರ ರೇಷ್ಮೆ ತರಬೇತಿ ಸಂಸ್ಥೆ ಮಂಗಳವಾರ ಏರ್ಪಡಿಸಿದ್ದ ಧಾರವಾಡ  ರೇಷ್ಮೆ ಬೆಳೆಗಾರರಿಗೆ ಕ್ಷೇತ್ರಮಟ್ಟ ತರಬೇತಿ ಕಾರ್ಯಕ್ರಮದಲ್ಲಿ ಎಂ.ಎನ್.ಲೋಕೇಶ ಮಾತನಾಡಿದರು    

ಉಪ್ಪಿನಬೆಟಗೇರಿ: ’ರೈತರು ರೇಷ್ಮೆ ಕೃಷಿಗೆ ಆದ್ಯತೆ ನೀಡಬೇಕು. ಇದರಿಂದ ಆರ್ಥಿಕ ಬಲವರ್ಧನೆ ಸಾಧ್ಯ’ ಎಂದು ರೇಷ್ಮೆಇಲಾಖೆ ಉಪನಿರ್ದೇಶಕ ಎಂ.ಎನ್.ಲೋಕೇಶ ಹೇಳಿದರು.

ಗ್ರಾಮದಲ್ಲಿ ರೇಷ್ಮೆ ಕೃಷಿ ಪ್ರಚಾರ ಆಂದೋಲನ, ರಾಯಾಪೂರ ರೇಷ್ಮೆ ತರಬೇತಿ ಸಂಸ್ಥೆ ಮಂಗಳವಾರ ಏರ್ಪಡಿಸಿದ್ದ ಧಾರವಾಡ ರೇಷ್ಮೆ ಬೆಳೆಗಾರರಿಗೆ ಕ್ಷೇತ್ರಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದಕ್ಷಿಣ ಕರ್ನಾಟಕದಲ್ಲಿ ಮಾತ್ರ ಇದ್ದ ರೇಷ್ಮೆ ಮಾರುಕಟ್ಟೆಯನ್ನು ಸರ್ಕಾರ ಉತ್ತರ ಕರ್ನಾಟಕದ ಹಾವೇರಿ ಹಾಗೂ ಕಲಬುರ್ಗಿ ಜಿಲ್ಲೆಯಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆ ವಿಸ್ತರಿಸಿದೆ ಎಂದರು.

ADVERTISEMENT

ರೇಷ್ಮೆ ಸಹಾಯಕ ನಿರ್ದೇಶಕ ಕೆ.ಎಸ್.ಪೂಜಾರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸೀರಅಹ್ಮದ ಮಾಳಗಿಮನಿ, ಕಲ್ಲಪ್ಪ ಪುಡಕಲಕಟ್ಟಿ, ಬಸವರಾಜ ಹೊಳೆಹಡಗಲಿ ಮಾತನಾಡಿದರು.

ರೈತರಾದ ಬಸಯ್ಯ ಚಿಕ್ಕಮಠ, ಆತ್ಮಾನಂದ ಬೊಬ್ಬಿ, ಮಲ್ಲಪ್ಪ ಮಾದನಬಾವಿ, ಪ್ರಕಾಶ ಸಾಂಬ್ರಾಣಿ, ಜಿ.ಎಂ.ಡಮ್ಮಣಗಿ, ಮಹಾಂತೇಶ ಚಿಕ್ಕಮಠ, ಮುನಾವರ ಮನ್ನಾಸಾಹೇಬ, ಚಂದ್ರನಾಥ ಅಷ್ಟಗಿ, ಯಲ್ಲಪ್ಪ ತಳವಾರ, ಧರಣೇಂದ್ರ ಅಷ್ಟಗಿ, ಗಂಗಪ್ಪ ತಳವಾರ, ಶ್ರೀಧರ ಬುದ್ನಿ, ಫಕ್ಕೀರಪ್ಪ ಶಿವಳ್ಳಿ ಸೇರಿದಂತೆ ಸುತ್ತಲಿನ ಗ್ರಾಮದ ರೈತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.