
ಉಪ್ಪಿನಬೆಟಗೇರಿ: ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಉಪ್ಪಿನಬೆಟಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೆರೆಯಲಾದ ಮುಂಗಾರು ಹಂಗಾಮಿನ ವಿವಿಧ ಬೆಳೆಯ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿದ ರೈತರು ಮಂಗಳವಾರ ಉದ್ದಿನ ಕಾಳು ಮಾರಾಟ ಮಾಡಿದರು.
ಈಗಾಗಲೇ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿದ ರೈತರು, ಬೆಳಗಿನಜಾವ ಟ್ರ‍್ಯಾಕ್ಟರ್‌ನಲ್ಲಿ ಉದ್ದಿನ ಚೀಲಗಳನ್ನು ಖರೀದಿ ಕೇಂದ್ರಕ್ಕೆ ತಲುಪಿಸುತ್ತಿದ್ದಾರೆ. ಸರದಿ ಪ್ರಕಾರ ಉದ್ದು ಮಾರಾಟ ಮಾಡುತ್ತಿದ್ದಾರೆ.
ಕಳೆದ ನಾಲ್ಕು ದಿನದಿಂದ ಖರೀದಿ ಕೇಂದ್ರದಲ್ಲಿ ರೈತರು ಬೆಳೆದ ಕಾಳುಗಳನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಲಾಗುತ್ತಿದೆ. ಈಗಾಗಲೇ 1,500 ಅಧಿಕ ರೈತರು ನೋಂದಣಿ ಮಾಡಿಸಿದ್ದಾರೆ. ಬೆಳಿಗ್ಗೆ 8ರಿಂದ ಸಂಜೆ 7ರವರೆಗೆ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಸರದಿ ಪ್ರಕಾರ ರೈತರಿಗೆ ಮುಂಚಿತವಾಗಿ ಮೊಬೈಲ್ ಕರೆ ಮಾಡಿ ತಿಳಿಸಲಾಗುತ್ತದೆ ಎಂದು ಪಿಕೆಪಿಎಸ್ ಸಿಬ್ಬಂದಿ ಸಲಿಂ ಖತೀಬ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.