ADVERTISEMENT

ರಾಮನ ಚರಿತ್ರೆ ಜಗತ್ತಿಗೆ ಪರಿಚಯಿಸಿದ ವಾಲ್ಮೀಕಿ: ಶಾಸಕ‌ ಮಹೇಶ ಟೆಂಗಿನಕಾಯಿ

ವಿವಿಧೆಡೆ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2023, 4:45 IST
Last Updated 29 ಅಕ್ಟೋಬರ್ 2023, 4:45 IST
<div class="paragraphs"><p>ಹುಬ್ಬಳ್ಳಿಯ ತಾಲ್ಲೂಕು ಆಡಳಿತಸೌಧದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಶನಿವಾರ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು</p></div>

ಹುಬ್ಬಳ್ಳಿಯ ತಾಲ್ಲೂಕು ಆಡಳಿತಸೌಧದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ಶನಿವಾರ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು

   

ಹುಬ್ಬಳ್ಳಿ: ಮಹರ್ಷಿ ವಾಲ್ಮೀಕಿ, ಬಸವಣ್ಣ, ಕನಕದಾಸರು, ಪುರಂದರದಾಸರು, ಅಂಬೇಡ್ಕರ್‌ ಸೇರಿದಂತೆ ಇತರ ಮಹನೀಯರ ಬಗ್ಗೆ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ರಾಮನ ಚರಿತ್ರೆ ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಮಹರ್ಷಿ ವಾಲ್ಮೀಕಿ ಅವರಿಗೆ ಸಲ್ಲುತ್ತದೆ ಎಂದು ಶಾಸಕ‌ ಮಹೇಶ ಟೆಂಗಿನಕಾಯಿ ಹೇಳಿದರು.

ನಗರದ ತಾಲ್ಲೂಕು ಆಡಳಿತಸೌಧದ ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯ್ತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

ಮುಂದಿನ ಪೀಳಿ‌ಗೆಗೆ ಹಬ್ಬ ಹರಿದಿನ ಸೇರಿದಂತೆ ವಿವಿಧ ಆಚರಣೆಗಳನ್ನು ಬಳುವಳಿಯಾಗಿ ನೀಡಬೇಕಿದೆ. ಮಹಾನ್‌ ನಾಯಕರನ್ನು ಒಂದೇ ಜಾತಿಗೆ ಸೀಮಿತಗೊಳಿಸಬಾರದು. ಸಂವಿಧಾನ ಅಡಿಯಲ್ಲಿ ಎಲ್ಲರೂ ಸಹಬಾಳ್ವೆಯಿಂದ ಜೀವನ ಸಾಗಿಸಬೇಕು ಎಂದರು.

ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ಸರ್ವರಿಗೂ ಸಮಬಾಳು ಸಮಪಾಲು ಎಂಬ ಸಂದೇಶ ಸಾರಿದ ಮಹನೀಯರು ಮಹರ್ಷಿ ವಾಲ್ಮೀಕಿ. ಎಲ್ಲ ಸಮಾಜದವರು ಸೇರಿ ಜಯಂತಿ ಆಚರಿಸಬೇಕಿದೆ. ಮನುಕುಲಕ್ಕೆ ಅಮೂಲ್ಯ ಗ್ರಂಥವಾದ ರಾಮಾಯಣ ನೀಡಿದ್ದಾರೆ. ಅವರ ಸಂದೇಶದ ಮಾರ್ಗದಲ್ಲಿ ನಾವೆಲ್ಲರೂ ನಡೆಯಬೇಕು ಎಂದು ತಿಳಿಸಿದರು.

ಸಮಾಜದ ಮುಖಂಡರಾದ ಗುರುನಾಥ ಉಳ್ಳಿಕಾಶಿ, ರವಿ ಬೆಂತೂರ್, ಪ್ರೇಮನಾಥ ಚಿಕ್ಕತುಂಬಳ ಮಾತನಾಡಿದರು.

ಮಹಿಳಾ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಭಾರತಿ ಹಿರೇಮಠ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಹುಬ್ಬಳ್ಳಿ ಶಹರ ತಹಶೀಲ್ದಾರ್‌ ಕಲಗೌಡ ಪಾಟೀಲ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮಚಂದ್ರ ಹೊಸಮನಿ, ಪಾಲಿಕೆ ಮಾಜಿ ಸದಸ್ಯ ಪ್ರಕಾಶ ಕ್ಯಾರಕಟ್ಟಿ, ರೇವಣಸಿದ್ದಪ್ಪ ಹೊಸಮನಿ, ಹನುಮಂತಪ್ಪ ಮಾಲಪಲ್ಲಿ, ಚಿದಾನಂದ ದಂಡ್ಡೆಪ್ಪನವರ, ಇಂದುಮತಿ ಸುರಗಾಂವಿ, ಅರುಣಕುಮಾರ ಗುದ್ಲಿ, ಪರಶುರಾಮ ಅರಕೇರಿ ಇದ್ದರು.

ಹುಬ್ಬಳ್ಳಿಯ ವಾಲ್ಮೀಕಿ ಮಹರ್ಷಿ ಜಯಂತಿ ಅಂಗವಾಗಿ ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹೊರಕೇರಿ ಮಾಸ್ತರ ಪ್ರತಿಷ್ಠಾನ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯಿಂದ ಇಂದಿರಾ ಗ್ಲಾಸ್‌ಹೌಸ್‌ನಲ್ಲಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು. ವಾಕರಸಾ ಸಂಸ್ಥೆಯ ಮಾಜಿ ಅಧ್ಯಕ್ಷ ಸದಾನಂದ ಡಂಗನವರ ನಿವೃತ್ತ ಪ್ರಾಚಾರ್ಯ ಪ್ರೊ.ಎಸ್.ಎಂ. ಸಾತ್ಮಾರ ಗ್ರಂಥಪಾಲಕ ಡಾ.ಸುರೇಶ ಹೊರಕೇರಿ ಚನ್ನಬಸಪ್ಪ ಧಾರವಾಡಶೆಟ್ಟರ ಅನೀಲ ಬುನಿಯನ್ ಇದ್ದಾರೆ

ಸಮಾಜದ ಮುಖಂಡರಾದ ಟಿ.ಬಿ. ಜೋಗಿನ, ಮಾರುತಿ ಬಾರಕೇರ, ಚಿದಾನಂದ ದಂಡಪ್ಪನವರ, ಅಶೋಕ ಸನ್ನಿ, ಆನಂದ ರಾಯಚೂರ, ಶಿವಾನಂದ ಕೋನಸಾಗರ, ಪ್ರಕಾಶ ಕುರಹಟ್ಟಿ ಅವರನ್ನು ಸನ್ಮಾನಿಸಲಾಯಿತು.

ಪ್ರತಿಭಾವಂತ ವಿದ್ಯಾರ್ಥಿಗಳಾದ ಪ್ರೀತಿ ದಳವಾಯಿ, ಸಂತೋಷ ರಟಗೇರಿ, ಭೂಮಿಕಾ ರಂಗಣ್ಣವರ, ಪೃಥ್ವಿರಾಜ ಹೆಬ್ಬಳ್ಳಿ, ಅಮೃತಾಭಾಗ್ಯಶ್ರೀ ಮೆತ್ರೆ, ಅಪೇಕ್ಷಾ ಸಿದ್ದಪ್ಪನವರ, ಸಮರ್ಥ ಮುದಗಲಿ, ವಂದಿತಾ ಲಿಂಬಾಳ್ಕರ, ಯಶೋಧಾ ಶೆಟ್ಟೆಣ್ಣವರ ಅವರನ್ನು ಸನ್ಮಾನಿಸಲಾಯಿತು.

ಎಸ್.ಎಸ್. ಶೆಟ್ಟರ್ ಫೌಂಡೇಷನ್‌:

ನಗರದ ಮಹಾತ್ಮ ಗಾಂಧಿ ಉದ್ಯಾನವನದಲ್ಲಿರುವ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಗೆ ಎಸ್.ಎಸ್. ಶೆಟ್ಟರ್ ಫೌಂಡೇಷನ್ ಅಧ್ಯಕ್ಷ ಸಂಕಲ್ಪ ಶೆಟ್ಟರ್ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಿದರು.

ಎಸ್.ಎಸ್. ಶೆಟ್ಟರ್ ಫೌಂಡೇಷನ್ ಸಂಯೋಜಕ ಪರಮ ಕಿತ್ಲಿ, ಶಿವರುದ್ರಪ್ಪ ಬಡಿಗೇರ, ವಿನಾಯಕ ಹುಲಿಹಳ್ಳಿ, ವಿನೋದ್ ಬಂಕಾಪುರ, ಸಿದ್ದು ಪರಣ್ಣವರ್, ಮಾಂತೇಶ್ ತಾವರೆ, ನರಸಿಂಹ ಅರೇಪಲ್ಲಿ, ಮಾಂತೇಶ್ ನಾಸಿ, ಸಂಜೀವ್ ಮೇಟಿ, ತೇಜಸ್ ಗೋಕಾಕ್ ಇದ್ದರು.

ಇಂದಿರಾ ಗಾಜಿನಮನೆ:

ಹುಬ್ಬಳ್ಳಿಯ ಇಂದಿರಾ ಗಾಜಿನಮನೆ ಆವರಣದಲ್ಲಿರುವ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಗೆ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ತೆಂಗಿನಕಾಯಿ ಪುಷ್ಪ ನಮನ ಸಲ್ಲಿಸಿದರು 

ಇಲ್ಲಿನ ಆವರಣದಲ್ಲಿ ಆದಿಕವಿ ವಾಲ್ಮೀಕಿ ಜಯಂತಿ ಅಂಗವಾಗಿ ವಾಲ್ಮೀಕಿ ಅವರ ಪುತ್ಥಳಿಗೆ ಹುಬ್ಬಳ್ಳಿ–ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ತೆಂಗಿನಕಾಯಿ ಪುಷ್ಪ ನಮನ ಸಲ್ಲಿಸಿದರು.

ನಂತರ ಮಾತನಾಡಿ ಶಾಸಕರು, ರಾಮಾಯಣ ಬರೆದು ಜಗತ್ತಿನ ಶ್ರೇಷ್ಠ ಕವಿಗಳು ಆಗಿದ್ದ ಅವರ ತತ್ವಾದರ್ಶ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿರುವ ಮಹರ್ಷಿ ವಾಲ್ಮೀಕಿ ಅವರ ಪುತ್ಥಳಿಗೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಮಾಲಾರ್ಪಣೆ ಮಾಡಿದರು. ಶಾಸಕ ಪ್ರಸಾದ ಅಬ್ಬಯ್ಯ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಪ ಹಳ್ಳೂರ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ ಇದ್ದಾರೆ

ಪಾಲಿಕೆ ಮೇಯರ್‌ ವೀಣಾ ಬರದ್ವಾಡ, ಉಪ ಮೇಯರ್‌ ಸತೀಶ್ ಹಾನಗಲ್, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಅರುಣ್ ಕುಮಾರ್ ಹೂದಲಿ, ಅಶೋಕ್ ವಾಲ್ಮೀಕಿ, ಪ್ರಕಾಶ್ ಕುರಹಟ್ಟಿ, ರವಿ ಬೆಂತೂರ್ ಇದ್ದರು.

ಬಿಜೆಪಿ ಕಚೇರಿ:

ಹುಬ್ಬಳ್ಳಿಯ ಗೋಕುಲ ರಸ್ತೆಯ ಅಕ್ಷಯ ಪಾರ್ಕ್‌ ಬಳಿ ಇರುವ ಡಾ.ಆರ್.ಬಿ. ಪಾಟೀಲ ಮಹೇಶ ಪ. ಪೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆದಿ ಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು 

ದೇಶಪಾಂಡೆ ನಗರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಶಾಸಕ ಮಹೇಶ ತೆಂಗಿನಕಾಯಿ, ಬಿಜೆಪಿ ಎಸ್ ಟಿ ಮೋರ್ಚಾ ಮುಖಂಡ ಅರುಣ್ ಕುಮಾರ್ ಹುದಲಿ, ಗ್ರಾಮಾಂತರ ಅಧ್ಯಕ್ಷ ಬಸವರಾಜ ಕುಂದಗೋಳ ಮಠ ಮಾಜಿ ಮಹಾಪುರ ಪ್ರಕಾಶ್ ಕ್ಯಾರಕಟ್ಟಿ, ಅಶೋಕ ವಾಲ್ಮೀಕಿ, ರಾಜು ಕಾಳೆ ಇದ್ದರು.

ಹುಬ್ಬಳ್ಳಿಯ ನವನಗರದಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.