ADVERTISEMENT

ವೀರಭದ್ರೇಶ್ವರ ದೇವರ ಸಂಭ್ರಮದ ಜಾತ್ರೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 4:02 IST
Last Updated 20 ಡಿಸೆಂಬರ್ 2021, 4:02 IST
ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ರಥೋತ್ಸವ ಭಾನುವಾರ ನಡೆಯಿತು
ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ರಥೋತ್ಸವ ಭಾನುವಾರ ನಡೆಯಿತು   

ಕಲಘಟಗಿ: ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ರಥೋತ್ಸವ ಭಾನುವಾರ ಅದ್ಧೂರಿಯಿಂದ ನಡೆಯಿತು.

ಕಲಘಟಗಿಯ ಹನ್ನೆರಡು ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಹೊಸದಾಗಿ ದೀಪಮಾಲಿ ಕಂಬ ಸ್ಥಾಪನೆ, ಕಳಸಾರೋಹಣ ಕಾರ್ಯಕ್ರಮ ಜರುಗಿತು. ನಂತರ ಅಭಿಷೇಕ, ಅಗ್ನಿಕುಂಡ, ಪಲ್ಲಕ್ಕಿ ಉತ್ಸವ, ಕುಂಭ ಮೇಳ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿವಿಧ ಪವಾಢ ಪ್ರದರ್ಶನ ಮಾಡುತ್ತ ಪುರವಂತರು ಸಾಗಿದರು.

ಮಹಿಳೆಯರು ಹಾಗೂ ಮಕ್ಕಳು ಅಗ್ನಿಕೊಂಡ ಹಾಯ್ದು ಸಾಗಿದರು. ಪುರವಂತರ ನೇತೃತ್ವದಲ್ಲಿ ವಿಧಿ ವಿಧಾನದ ಮೂಲಕ ಹಿತ್ತಾಳೆ, ಕಬ್ಬಿಣದ ಸಲಾಕೆ ಹಾಗೂ ದಾರದ ಮೂಲಕ ಶಸ್ತ್ರ ಹಾಕಿಸಿಕೊಂಡರು. ಭಕ್ತಾದಿಗಳು ಹರಕೆ ತೀರಿಸಿದರು.

ADVERTISEMENT

ರಥೋತ್ಸವ ಸಾಗುತ್ತಿದ್ದಂತೆ ನೂರಾರು ಭಕ್ತರು ಬಾಳೆಹಣ್ಣು, ಉತ್ತತ್ತಿ ಎಸೆದು ಕೈ ಮುಗಿದರು. ನಂತರ ತೊಟ್ಟಿಲು ಸೇವೆ ಸಲ್ಲಿಸಿದ ಎಲ್ಲರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಹಿರಿಯ ದಿವಾಣಿ ನ್ಯಾಯಾಧೀಶ ಜಿ.ಆರ್ ಶೆಟ್ಟರ್, ಬಿಜೆಪಿ ಮುಖಂಡ ಶಶಿಧರ ನಿಂಬಣ್ಣವರ, ವೈ.ಬಿ ದಾಸನಕೊಪ್ಪ, ಗೋವಿಂದಪ್ಪ ಭೋವಿ, ಕೆ.ಟಿ ಚಿಕ್ಕಾಡಿ, ಈಶ್ವರ ಜವಳಿ ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.