ADVERTISEMENT

ಹುಬ್ಬಳ್ಳಿಯಲ್ಲಿ ತೊನ್ನು ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 7 ಜುಲೈ 2018, 14:09 IST
Last Updated 7 ಜುಲೈ 2018, 14:09 IST
ತೊನ್ನು ಚರ್ಮ ರೋಗದ ಬಗ್ಗೆ ವೈದ್ಯರು ಕಿಮ್ಸ್ ಆವರಣದಲ್ಲಿ ಮಾಹಿತಿ ನೀಡಿದರು.
ತೊನ್ನು ಚರ್ಮ ರೋಗದ ಬಗ್ಗೆ ವೈದ್ಯರು ಕಿಮ್ಸ್ ಆವರಣದಲ್ಲಿ ಮಾಹಿತಿ ನೀಡಿದರು.   

ಹುಬ್ಬಳ್ಳಿ:ನಗರದ ವಿವಿಧ ಪ್ರದೇಶಗಳಲ್ಲಿ ತೊನ್ನು (ವಿಟಿಲಿಗೊ) ಜನ ಜಾಗೃತಿ ಕಾರ್ಯಕ್ರಮ ಶನಿವಾರ ನಡೆಯಿತು.

ಚರ್ಮರೋಗ ವೈದ್ಯರ ಸಂಘದ ಕರ್ನಾಟಕ ಶಾಖೆ ಈ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ನಗರದ ಕರ್ನಾಟಕ ವೈದ್ಯಕೀಯ ಸಂಸ್ಥೆ ಆವರಣ, ಚನ್ನಮ್ಮ ವೃತ್ತ, ರೈಲು ನಿಲ್ದಾಣ, ಅಕ್ಷಯ ಪಾರ್ಕ್, ಹುಬ್ಬಳ್ಳಿ ಬಸ್ ನಿಲ್ದಾಣಕ್ಕೆ ಜಾಗೃತಿ ವಾಹನದೊಂದಿಗೆ ತೆರಳಿದ ಸ್ಥಳೀಯ ಚರ್ಮ ರೋಗ ತಜ್ಞರು ಮಾಹಿತಿ ನೀಡಿದರು. ಸಂಕ್ಷಿಪ್ತ ಮಾಹಿತಿ ಇರುವ ಕರಪತ್ರಗಳನ್ನು ಹಂಚಿಸಿದರು. ವಿಡಿಯೊ ತುಣಕುಗಳನ್ನು ಪ್ರದರ್ಶಿಸಿದರು.

ತೊನ್ನಿಗೆ ಚಿಕಿತ್ಸೆಯೇ ಇಲ್ಲ ಎಂಬುದು ತಪ್ಪು ಕಲ್ಪನೆ. ಅದರ ಬಗ್ಗೆ ಮೂಢನಂಬಿಕೆ ಸರಿಯಲ್ಲ ಹಾಗೂ ಇದೊಂದು ಸಾಂಕ್ರಾಮಿಕ ರೋಗವಲ್ಲ ಎಂದು ಮನವರಿಕೆ ಮಾಡಿಕೊಟ್ಟರು.ಕೆಲವು ಕಡೆ ಜನರು ಪ್ರಶ್ನೆಗಳನ್ನು ಕೇಳುವ ಮೂಲಕ ತಮ್ಮ ಸಂದೇಹ ಬಗೆಹರಿಸಿಕೊಂಡರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.