ADVERTISEMENT

ಕಲಘಟಗಿ: ಶಾಲೆಗಳಲ್ಲಿ ‘ನೀರಿನ ಗಂಟೆ’

ವಿದ್ಯಾರ್ಥಿಗಳಲ್ಲಿ ನಿರ್ಜಲಿಕರಣ ತಡೆಗೆ ಶಾಲಾ ಶಿಕ್ಷಣ ಇಲಾಖೆಯಿಂದ ಪ್ರಯೋಗ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 4:52 IST
Last Updated 7 ಫೆಬ್ರುವರಿ 2026, 4:52 IST
<div class="paragraphs"><p>ಕಲಘಟಗಿ ತಾಲ್ಲೂಕಿನ ಚಳಮಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಾಟಲಿಗಳನ್ನು ವಿತರಿಸಲಾಯಿತು</p></div>

ಕಲಘಟಗಿ ತಾಲ್ಲೂಕಿನ ಚಳಮಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಬಾಟಲಿಗಳನ್ನು ವಿತರಿಸಲಾಯಿತು

   

ಧಾರವಾಡ: ಮಕ್ಕಳಿಗೆ ನೀರು ಕುಡಿಯುವಂತೆ ಜ್ಞಾಪಿಸಲು ಕಲಘಟಗಿ ತಾಲ್ಲೂಕಿನ ಚಳಮಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜ.26ರಿಂದ ಎರಡು ಗಂಟೆಗೊಮ್ಮೆ ನೀರಿನ ಗಂಟೆ (ವಾಟರ್‌ ಬೆಲ್‌) ಬಾರಿಸಲು ವ್ಯವಸ್ಥೆ ಮಾಡಲಾಗಿದೆ.

ನೀರಿನ ಗಂಟೆ ಬಾರಿಸಿದಾಗ ನೀರು ಕುಡಿಯುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ಚಳಮಟ್ಟಿ ಗ್ರಾಮದ ಶಾಲೆಯಲ್ಲಿ (1ರಿಂದ 8ನೇ ತರಗತಿ) 147 ವಿದ್ಯಾರ್ಥಿಗಳು ಇದ್ದಾರೆ.

ADVERTISEMENT

‘ಲಯನ್ಸ್‌ ಕ್ಲಬ್‌ ಆಫ್‌ ಹುಬ್ಬಳ್ಳಿ ಸಿಟಿ ಸಂಸ್ಥೆಯವರು ಶಾಲೆಯ ಎಲ್ಲ ವಿದ್ಯಾರ್ತಿಗಳಿಗೆ ಬಾಟಲಿಗಳನ್ನು ಉಚಿತವಾಗಿ ಒದಗಿಸಿದ್ಧಾರೆ. ಶಾಲೆಯಲ್ಲಿ ಕುಡಿಯು ನೀರಿನ ಸೌಕರ್ಯ ಇದೆ. ಬೆಳಿಗ್ಗೆ 10.30, ಮಧ್ಯಾಹ್ನ 12ಕ್ಕೆ 2 ಮತ್ತು 4 ಗಂಟೆಗೆ ಗಂಟೆ ಬಾರಿಸಲಾಗುತ್ತದೆ. ಆಗ ವಿದ್ಯಾರ್ಥಿಗಳು ನೀರು ಕುಡಿಯುತ್ತಾರೆ’ ಎಂದು ಶಾಲೆಯ ಮುಖ್ಯ ಶಿಕ್ಷಕ ಮಾರುತಿ ಎಚ್‌.ಭಜಂತ್ರಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈಗ ಬಿಸಿಲು ಜಾಸ್ತಿ ಇದೆ. ಮ‌ಕ್ಕಳು ಆಗಾಗ್ಗೆ ನೀರು ಕುಡಿದರೆ ಲವಲವಿಕೆಯಿಂದ ಇರುತ್ತಾರೆ. ಚಟುವಟಿಕೆಗಳಲ್ಲಿ ಆಸ್ತಕಿ ವಹಿಸುತ್ತಾರೆ. ಆರೋಗ್ಯ ಚೆನ್ನಾಗಿರುತ್ತದೆ. ಮೇಲಧಿಕಾರಿಗಳ ಸೂಚನೆ ಮೇರೆಗೆ ಈ ವ್ಯವಸ್ಥೆ ಜಾರಿಗೊಳಿಸಲಾಗಿದೆ’ ಎಂದರು.

‘ಶಾಲೆಗಳಲ್ಲಿ ಈ ವ್ಯವಸ್ಥೆ ಜಾರಿಗೊಳಿಸುವಂತೆ ಶಾಲಾ ಶಿಕ್ಷಣ ಇಲಾಖೆ ಈಚೆಗೆ ಸುತ್ತೋಲೆ ಹೊರಡಿಸಿದೆ. ಆರೋಗ್ಯ ಮತ್ತು ಬೆಳವಣಿಗೆ ನಿಟ್ಟಿನಲ್ಲಿ ಮಕ್ಕಳು ನೀರು ಕುಡಿಯಬೇಕು. ಶಾಲೆಯಲ್ಲಿ ಮಕ್ಕಳು ಆಟ, ಅಭ್ಯಾಸ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ. ನೀರು ಕುಡಿಯವುದನ್ನು ನೆನಪಿಸಲು ಈ ವ್ಯವಸ್ಥೆ ಮಾಡಲಾಗಿದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿ ಎಸ್‌.ಎಂ. ಹುಡೇದಮನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.