ADVERTISEMENT

ವೈದ್ಯರ ಮನೆಗೆ ಬಂದುಹೋದ ವನ್ಯಪ್ರಾಣಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 16:06 IST
Last Updated 3 ಜುಲೈ 2018, 16:06 IST

ಧಾರವಾಡ: ನಗರದ ವೈದ್ಯರೊಬ್ಬರ ಮನೆಗೆ ಸೋಮವಾರ ತಡರಾತ್ರಿ ಕರಡಿ ಆಕಾರದ ಪ್ರಾಣಿಯೊಂದು ಬಂದು ಹೋಗಿದ್ದು ಅವರ ಮನೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಮಿಚಿಗನ್ ಬಡಾವಣೆಯ ವೆಂಕಟೇಶ ನಗರದಲ್ಲಿರುವ ಡಾ. ಮಠಪತಿ ಅವರ ಮನೆಯ ಅಕ್ಕಪಕ್ಕ ಓಡಾಡಿದ ಈ ಪ್ರಾಣಿ, ನಂತರ ಗೇಟಿನ ಮಧ್ಯಭಾಗದಲ್ಲಿರುವ ಜಾಗದಲ್ಲಿ ನುಸುಳಿಕೊಂಡು ಮನೆಯೊಳಗೆ ಹೋಗುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಸಿಸಿಟಿವಿಯಲ್ಲಿ ದಾಖಲಾದ ಪ್ರಾಣಿ ಹನಿ ಬ್ಯಾಡ್ಜ್ ಅಥವಾ ಪುನುಗಿನ ಬೆಕ್ಕಿನ ಆಕಾರದಲ್ಲಿದೆ. ಆದರೆ ಕೆಲವೊಮ್ಮೆ ಕರಡಿಯಂತೆಯೂ ಕಾಣುತ್ತಿದೆ.

‘ನಗರ ಪ್ರದೇಶದಲ್ಲಿ ವನ್ಯಪ್ರಾಣಿಯೊಂದು ಬಂದು ಹೋಗಿರುವುದು ಪ್ರಾಣಿಗೆ ಹಾಗೂ ಮನುಷ್ಯರಿಗೆ ಇಬ್ಬರಿಗೂ ತೊಂದರೆಯಾಗುವ ಸಾಧ್ಯತೆ ಹೆಚ್ಚು. ಇಂಥ ಸಂದರ್ಭದಲ್ಲಿ ಮಾಹಿತಿಯನ್ನು ತಕ್ಷಣ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಇಲ್ಲವೇ ಉಚಿತ ದೂರವಾಣಿ ಸಂಖ್ಯೆ 1926ಗೆ ಕರೆ ಮಾಡಿಯಾದರೂ ಸಾರ್ವಜನಿಕರು ತಿಳಿಸಬೇಕು’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ವಿ.ಮಂಜುನಾಥ್ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.