ADVERTISEMENT

ಐಎಂಎ ಮಹಿಳಾ ವೈದ್ಯರ ಘಟಕ ಅಸ್ತಿತ್ವಕ್ಕೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 4:54 IST
Last Updated 7 ಡಿಸೆಂಬರ್ 2021, 4:54 IST
ಹುಬ್ಬಳ್ಳಿಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಮಹಿಳಾ ವೈದ್ಯರ ಘಟಕದ ನೂತನ ಪದಾಧಿಕಾರಿಗಳಿಗೆ ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ. ಸುರೇಶ ಕುಡ್ವ ಅವರು ಪ್ರಮಾಣವಚನ ಬೋಧಿಸಿದರು
ಹುಬ್ಬಳ್ಳಿಯಲ್ಲಿ ಭಾರತೀಯ ವೈದ್ಯಕೀಯ ಸಂಘದ ಮಹಿಳಾ ವೈದ್ಯರ ಘಟಕದ ನೂತನ ಪದಾಧಿಕಾರಿಗಳಿಗೆ ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ. ಸುರೇಶ ಕುಡ್ವ ಅವರು ಪ್ರಮಾಣವಚನ ಬೋಧಿಸಿದರು   

ಹುಬ್ಬಳ್ಳಿ: ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಹಿಳಾ ವೈದ್ಯರ ಘಟಕ ಅಸ್ತಿತ್ವಕ್ಕೆ ಬಂದಿದ್ದು, ನೂತನ ಪದಾಧಿಕಾರಿಗಳ ಪದಾರ್ಪಣೆ ಕಾರ್ಯಕ್ರಮಕ್ಕೆ ನಗರದಲ್ಲಿ ಇತ್ತೀಚೆಗೆ ನಡೆಯಿತು.

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಸಂಗೀತಾ ಅಂಟರತಾನಿ, ಉಪಾಧ್ಯಕ್ಷೆಯಾಗಿ ಡಾ. ಶಶಿ ಹೊಸಮನಿ, ಸಂಯೋಜಕರಾಗಿ ಜಯಶ್ರೀ ಬಳಿಗಾರ, ಕಾರ್ಯದರ್ಶಿಯಾಗಿ ಡಾ. ಭಾರತಿ ಭಾವಿಕಟ್ಟಿ ಹಾಗೂ ಖಜಾಂಚಿಯಾಗಿ ಡಾ. ಕಾಂಚನಾ ಯು.ಟಿ ಅವರು ಅಧಿಕಾರ ಸ್ವೀಕರಿಸಿದರು.

ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ. ಸುರೇಶ ಕುಡ್ವ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಹುಬ್ಬಳ್ಳಿ ಘಟಕದ ಅಧ್ಯಕ್ಷ ಡಾ.ಎಸ್‌.ವೈ. ಮುಲ್ಕಿ ಪಾಟೀಲ, ಡಾ. ಎಸ್‌.ಬಿ. ಲಕ್ಕೋಳ, ಡಾ.ಜಿ.ಕೆ. ಭಟ್, ಡಾ. ಕುಂಬಾರ್, ಡಾ. ಬಬ್ರುವಾಡ, ಡಾ. ಮಂಜುನಾಥ ನೇಕಾರ, ಡಾ. ಸಚಿನ್ ರೇವಣಕರ, ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹಾಗೂ ಪ್ರಾಚಾರ್ಯ ಡಾ. ಈಶ್ವರ ಹೊಸಮನಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.