ADVERTISEMENT

4 ಅಣುಬಾಂಬ್‌ ಹಾಕಿದರೆ ಪಾಕಿಸ್ತಾನ ಸರ್ವನಾಶ: ಶಾಸಕ ಬಸನಗೌಡ ಪಾಟೀಲ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 13:32 IST
Last Updated 28 ಏಪ್ರಿಲ್ 2025, 13:32 IST
<div class="paragraphs"><p>ಶಾಸಕ ಬಸನಗೌಡ ಪಾಟೀಲ ಯತ್ನಾಳ</p></div>

ಶಾಸಕ ಬಸನಗೌಡ ಪಾಟೀಲ ಯತ್ನಾಳ

   

ಹುಬ್ಬಳ್ಳಿ: ‘ನಮ್ಮಲ್ಲಿರುವ 4 ಅಣುಬಾಂಬ್‌ಗಳನ್ನು ಎಸೆದರೆ, ಪಾಕಿಸ್ತಾನ ಸರ್ವನಾಶವಾಗುತ್ತದೆ. ಭಾರತದ ಶಕ್ತಿಯನ್ನು ಯಾರೂ ಹಗುರವಾಗಿ ಪರಿಗಣಿಸಬಾರದು. ಈ ಸಲ ಪಾಕಿಸ್ತಾನ ಅಂತ್ಯವಾಗಬೇಕು’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

‘ಕಾಂಗ್ರೆಸ್ ಹಿಂದೂಗಳ ಪಕ್ಷವಲ್ಲ. ಅದು ಹುಟ್ಟಿದ್ದೇ ಮುಸ್ಲಿಮರಿಗಾಗಿ. ಎಲ್ಲಿಯವರೆಗೆ ಮುಸ್ಲಿಮರು ದೇಶದಲ್ಲಿ ಇರ್ತಾರೋ ಅಲ್ಲಿಯವರೆಗೆ ಅವರು ಕಲ್ಲು ಹೊಡೆಯುತ್ತಾರೆ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಮೋದಿ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕತೆ ಇಲ್ಲ. ಪ್ರಧಾನಿ ಮೋದಿ ಎದುರು ಸಚಿವ ಸಂತೋಷ ಲಾಡ್ ಬಚ್ಚಾ. ಹಿಂಗೆ ಮಾತನಾಡಿದ್ರೆ ರಾಹುಲ್ ಗಾಂಧಿ ಖುಷಿಯಾಗುತ್ತಾರೆ. ಸಚಿವ ಸ್ಥಾನ ಉಳಿಯುತ್ತೆ ಎಂಬ ಭಾವನೆಯಲ್ಲಿ ಅವರು ಮಾತನಾಡುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.