ADVERTISEMENT

‘ಕುಡಿಯಾಕ್‌ ನೀರ್‌ ಬಿಡ್ರಿ ಅಂದ್ರ ಬಿಡ್ಲಿಲ್ರೀ...’

ಪ್ರವಾಹ ಪೀಡಿತ ರಾಮದುರ್ಗ ತಾಲ್ಲೂಕಿಗೆ ಮುಖ್ಯಮಂತ್ರಿ ಭೇಟಿ: ಸಂತ್ರಸ್ತರ ಗೋಳು

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 20:00 IST
Last Updated 10 ಸೆಪ್ಟೆಂಬರ್ 2019, 20:00 IST
ರಾಮದುರ್ಗ ತಾಲ್ಲೂಕಿನ ಹಂಪಿಹೊಳಿ ಗ್ರಾಮಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಂಗಳವಾರ ಭೇಟಿ ನೀಡಿದಾಗ ಗ್ರಾಮಸ್ಥರು ತಮ್ಮ ಗೋಳು ತೋಡಿಕೊಂಡರು
ರಾಮದುರ್ಗ ತಾಲ್ಲೂಕಿನ ಹಂಪಿಹೊಳಿ ಗ್ರಾಮಕ್ಕೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮಂಗಳವಾರ ಭೇಟಿ ನೀಡಿದಾಗ ಗ್ರಾಮಸ್ಥರು ತಮ್ಮ ಗೋಳು ತೋಡಿಕೊಂಡರು   

ರಾಮದುರ್ಗ(ಬೆಳಗಾವಿ): ‘ಕುಡಿಯಾಕ್ನೀರ್‌ ಬಿಡ್ರಿ ಅಂದ್ರ ಯಾರೂ ಬಿಡ್ಲಿಲ್ರೀ. ಆದ್ರ ಈಗ ಒಮ್ಮಿಂದೊಮ್ಮೆಲೇ ಇಷ್ಟೊಂದ್
ನೀರ್‌ಬಿಟ್ಟ ನಮ್ಮ ಜೀವನಾನ್ ಹಾಳ್ ಮಾಡ್ಯಾರ್ರೀ....’

ಪ್ರವಾಹ ಪೀಡಿತ ತಾಲ್ಲೂಕಿನ ಗ್ರಾಮಗಳಿಗೆ ಮಂಗಳವಾರ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಿದ ಸಂದರ್ಭದಲ್ಲಿ ಹಂಪಿಹೊಳಿ ಸಂತ್ರಸ್ತ ಭೀಮಪ್ಪ ತಮ್ಮ ಗೋಳು ತೋಡಿಕೊಂಡಿದ್ದು ಹೀಗೆ.

‘ಡ್ಯಾಮ್‌ನ್ಯಾಗ ನಿಂತಿದ್ದ ನೀರನಾ ಸ್ವಲ್ಪ ಸ್ವಲ್ಪ ಬಿಟ್ಟಿದ್ರ್‌ ಏನೂ ಸಮಸ್ಯೆ ಆಕ್ಕಿರಲಿಲ್ಲರೀ. ಮ್ಯಾಲ್ ಮಳಿ ಅಕ್ಕೆತೊ ಇಲ್ಲ ಅನ್ನೋದ್‌ ರೈತರಿಗೆ ಗೊತ್ತಾಕ್ಕೇತಿ. ಎಂಜಿನಿಯರ್‌ಗೆ ಗೊತ್ತಾಗಲ್ಲ ಅಂದ್ರ್‌ ಹೆಂಗರಿ? ಒಮ್ಯಾಕ್‌ ನೀರು ಬಿಟ್ರ್‌ ಕೆಳಗಿನವರ ಗತಿ ಹ್ಯಾಂಗ್ರಿ’ ಎಂದು ಸಂತ್ರಸ್ತರು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದರು.

ADVERTISEMENT

ಸಂತ್ರಸ್ತರ ಅಳಲು ಆಲಿಸಿದ ಯಡಿಯೂರಪ್ಪ, ‘ಪ್ರವಾಹ ಪೀಡಿತರಿಗೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.