
ಗಜೇಂದ್ರಗಡ: ಪುರಸಭೆ ಒಡೆತನದ ಉದ್ಯಾನ ಫಲಕದ ವಿವಾದ ಗುರುವಾರ ಹೊಸ ತಿರುವು ಪಡೆದುಕೊಂಡು, ಅಲ್ಲಿ ದಲಿತಪರ ಸಂಘಟನೆಗಳು ಅಂಬೇಡ್ಕರ್ ನಾಮಫಲಕ ಹಾಕಿದ್ದಾರೆ.
ಪುರಸಭೆ ವ್ಯಾಪ್ತಿಯ ಉದ್ಯಾನಕ್ಕೆ ಭಗತ್‌ಸಿಂಗ ಹೆಸರನ್ನು ಇಡುವಂತೆ ಜಿಲ್ಲಾಧಿಕಾರಿ ಅನುಮೋದನೆಗಾಗಿ ಪ್ರಸ್ತಾವ ಕಳುಹಿಸಲಾಗಿತ್ತು. ಆದರೆ ಕೆಲ ವರು ಸ್ವಾತಂತ್ರ್ಯೋತ್ಸವ ಮುನ್ನಾ ದಿನ ಅಲ್ಲಿ ಕಿತ್ತೂರ ರಾಣಿ ಚನ್ನಮ್ಮ ಹೆಸರಿನ ನಾಮಫಲಕ ಹಾಕಿದ್ದರು. ನಾಮಫಲಕ ತೆರವುಗೊಳಿಸದಂತೆ ಒತ್ತಾಯಿಸಿ ಪುರ ಸಭೆ ಸಿಓಗೆ ಮನವಿ ಸಲ್ಲಿಸಿದ್ದರು.
ಪ್ರಕರಣ ಇಂದು ಹೊಸ ತಿರುವು ಪಡೆದಿದ್ದು, ಉದ್ಯಾನಕ್ಕೆ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಹೆಸರಿಡು ವಂತೆ ಒತ್ತಾಯಿಸಿ ದಲಿತಪರ ಸಂಘಟನೆ ಗಳ ಹೋರಾಟ ಸಮಿತಿಯವರು ಅಂಬೇಡ್ಕರ್ ನಾಮಫಲಕ ಹಾಕಿದರು. ಕಾನೂನಿನನ್ವಯ ಪುರಸಭೆ ಸಾಮಾನ್ಯ ಸಭೆಯಲ್ಲಿ ಡಾ.ಅಂಬೇಡ್ಕರ್ ಹೆಸರಿಡು ವಂತೆ ಠರಾವು ಮಾಡಬೇಕೆಂದು ಪುರಸಭೆಗೆ ಮನವಿ ಸಲ್ಲಿಸಿದರು.
ದಲಿತ ಸಂಘಟನೆಯ ಹೋರಾಟ ಸಮಿತಿಯ ಉಮೇಶ ರಾಠೋಡ, ರವಿ ಗಡೇದವರ, ಪ್ರಶಾಂತ ರಾಠೋಡ, ಬಸವರಾಜ ಮಾಳೋತ್ತರ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.