ADVERTISEMENT

‘ಕಾಂಗ್ರೆಸ್ ವೈಫಲ್ಯ ಜನರಿಗೆ ತಿಳಿಸಿ’

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 8:09 IST
Last Updated 5 ಅಕ್ಟೋಬರ್ 2017, 8:09 IST

ಗಜೇಂದ್ರಗಡ: ರಾಜ್ಯ ಸರ್ಕಾರದ ವೈಫಲ್ಯವನ್ನು ಜನರಿಗೆ ತಿಳಿಸಿ, ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತು ಜನರಿಗೆ ತಿಳಿಸಿ, ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ ಹೇಳಿದರು.

ಪಟ್ಟಣದ ಬಂಡಿ ಗಾರ್ಡನ್‌ನಲ್ಲಿ ನಡೆದ ಬಿಜೆಪಿ ರೋಣ ಮಂಡಲ ಪ್ರಮುಖ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮೀತ್ ಶಾ ರಾಜ್ಯದಲ್ಲಿ 150ಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ತಂತ್ರ ರೂಪಿಸಿದ್ದು, ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಜನರ ವಿಶ್ವಾಸ ಗಳಿಸಬೇಕು ಎಂದರು.

ADVERTISEMENT

ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, ರಾಜ್ಯದಲ್ಲಿ ಸುಮಾರು 1,700 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಷ್ಠಾವಂತ ಅಧಿಕಾರಿಗಳು ಅನುಮಾನಾಸ್ಪದವಾಗಿ ಸಾವಿಗೀಡಾಗುತ್ತಿದ್ದರೂ ಸರ್ಕಾರ ಸೂಕ್ತ ತನಿಖೆ ನಡೆಸಿ, ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ಮುತ್ತಣ್ಣ ಲಿಂಗನಗೌಡ್ರ, ರಾಮಣ್ಣ ಶಿಂಗಟಾಲಕೇರಿ, ರಾಜು ಕುರಡಗಿ, ಸುಧೀರ ಕಟಗೇರ, ಶರಣಪ್ಪ ಕಂಬಳಿ, ವೀರಣ್ಣ ಅಂಗಡಿ, ಮುತ್ತು ಕಡಗದ, ಭಾಸ್ಕರ ರಾಯಬಾಗಿ, ಬುಡ್ಡಪ್ಪ ಮೂಲಿ ಮನಿ, ಅಶೋಕ ವನ್ನಾಲ, ರಾಚನಗೌಡ ಗೌಡರ, ಅನಿಲಕುಮಾರ ಪಲ್ಲೇದ, ಮಾಂತೇಶ ಸೋಮನಕಟ್ಟಿ, ಸುಮಿತ್ರಾ ತೊಂಡಿಹಾಳ, ಕವಿತಾ ಜಾಲಿಹಾಳ, ಅಪ್ಪಣ್ಣ ಮಹೇಂದ್ರಕರ, ಹೊನ್ನುಸಾ ದಾನಿ, ಶಂಕರ ಇಂಜನಿ, ಎಂ.ಎಸ್. ಕರಿ ಗೌಡ್ರ ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.