ADVERTISEMENT

ಕಾನೂನು ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2012, 6:30 IST
Last Updated 16 ಅಕ್ಟೋಬರ್ 2012, 6:30 IST

ಗದಗ: ದಿನ ನಿತ್ಯದ ಬದುಕಿನಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಜ್ಞಾನ ಅಗತ್ಯವಾಗಿ ಬೇಕು ಎಂದು ಜಿಲ್ಲಾ ಸೆಷೆನ್ಸ್ ನ್ಯಾಯಾಧೀಶ ಆರ್.ಜೆ. ಸತೀಶ ಸಿಂಗ್ ಹೇಳಿದರು.

ತಾಲ್ಲೂಕಿನ ಹೊಸಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಗದುಗಿನ ಕನ್ನಡ ಕಿರಣ ಶಿಕ್ಷಣ ಸಮಿತಿಯ ಸಮಾಜಕಾರ್ಯ ಮಹಾವಿದ್ಯಾಲಯ ಹಮ್ಮಿಕೊಂಡಿದ್ದ ಸಮಾಜ ಕಾರ್ಯ ಶಿಬಿರ ಉದ್ಘಾಟಿಸಿ ಮಾತ ನಾಡಿದರು.

ಕಾನೂನನ್ನು ಅರಿತಾಗ ಮಾತ್ರ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಿ ನ್ಯಾಯಯುತ ಜೀವನ ನಡೆಸಲು ಸಾಧ್ಯ. ಸರ್ಕಾರದ ಸೌಲಭ್ಯ ಗಳನ್ನು ಸದುಪಯೋಗ ಪಡಿಸಿಕೊಂಡು ಶೌಚಾಲಯ ನಿರ್ಮಿಸಿಕೊಳ್ಳಲು ಗ್ರಾಮ ಸ್ಥರು ಮುಂದಾಗಬೇಕು ಎಂದು ಸಲಹೆ ನೀಡಿದರು.

ವ್ಯಾಜ್ಯಗಳನ್ನು ರಾಜೀ ಸಂಧಾನ ಮೂಲಕ ಬಗೆಹರಿಸಿಕೊಂಡು ಸೌಹಾ ರ್ಧತೆ ಬೆಳೆಸಿಕೊಳ್ಳಬೇಕು. ಎನ್‌ಎಸ್‌ಎಸ್ ವಿದ್ಯಾರ್ಥಿಗಳು ಜನರಲ್ಲಿ ಆರೋಗ್ಯ, ಕಾನೂನಿನ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.

ನ್ಯಾಯಾಧೀಶ ಉಮೇಶ ಮೂಲಿ ಮನಿ ಮಾತನಾಡಿ, ಗ್ರಾಮಗಳಲ್ಲಿ ವಿದ್ಯುತ್ ಕೊರತೆ ನೀಗಿಸಲು ಶೆಗಣಿಯ ಮೂಲಕ ಗೋಬರ ಗ್ಯಾಸ ಉತ್ಪಾ ದಿಸುವ ವ್ಯವಸ್ಥೆಗಳನ್ನು ಬಳಸಿಕೊಂಡು ವಿದ್ಯುತ್ ಹಾಗೂ ಗ್ರಾಸ್ ಒಲೆ ಉಪಯೋಗಿಸಿ ಕೊಳ್ಳಬೇಕು. ಇದರಿಂದ ಹಣದ ಉಳಿತಾಯ ಮಾಡಬಹುದು ಹಾಗೂ ಪರಿಸರವನ್ನು ಶುದ್ಧವಾಗಿಟ್ಟು ಕೊಳ್ಳಲು ಸಾಧ್ಯ ಎಂದರು.  

 ಕುರ್ತಕೋಟಿ ಗ್ರಾಮ ಪಂಚಾಯಿತಿ ಸದಸ್ಯ ಅಪ್ಪಣ್ಣ ಇನಾಮತಿ ಅಧ್ಯಕ್ಷತೆ ವಹಿಸಿದ್ದರು. ಶೇಖರಯ್ಯ ಹೊಸಮಠ, ಡಾ. ಬಸವರಾಜ ವೆಂಕಟಾಪುರ, ಶಿವಪುತ್ರಪ್ಪ ಕಪ್ಪರಶೆಟ್ಟರ ಮತ್ತಿತರರು ಹಾಜರಿದ್ದರು.

ಪೂರ್ಣಿಮಾ ಹುಚ್ಚನಗೌಡರ ಪ್ರಾರ್ಥಿಸಿದರು. ಡಿ.ಎಚ್. ನಾಯಕ ಸ್ವಾಗತಿಸಿದರು. ಜೆ.ಎಸ್. ಸೋಬಾನದ ಹಾಗೂ ಬಿ.ಎಸ್. ಕಲಕೇರಿ ನಿರೂಪಿಸಿದರು. ಪ್ರೊ. ಪಿ.ಎಸ್. ಗಾಣಿಗೇರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.