ADVERTISEMENT

ಗದಗ ನಗರಸಭೆ: ಉಳಿತಾಯ ಬಜೆಟ್ ಮಂಡನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 8:55 IST
Last Updated 4 ಏಪ್ರಿಲ್ 2012, 8:55 IST

ಗದಗ: ಇಲ್ಲಿನ ನಗರಸಭೆಯು 2012- 13ನೇ ಸಾಲಿಗೆ 1.93ಕೋಟಿ ರೂಪಾಯಿ ನಿರೀಕ್ಷಿತ ಉಳಿತಾಯ ಬಜೆಟ್‌ಗೆ ಅನುಮೋದನೆ ಪಡೆದು ಕೊಂಡಿದೆ.

ನಗರಸಭೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆ ಯಲ್ಲಿ ಅಧ್ಯಕ್ಷ ಶಿವಣ್ಣ ಮುಳಗುಂದ ಬಜೆಟ್ ಮಂಡಿಸಿದರು.

ಮುಂದಿನ ವರ್ಷದಲ್ಲಿ  ವಿವಿಧ ಮೂಲಗಳಿಂದ 52,40,60,500 ರೂಪಾಯಿ ಆದಾಯನ್ನು ನಗರಸಭೆ ನಿರೀಕ್ಷೆ ಮಾಡಿದೆ. ವೇತನ ಅನುದಾನ- ರೂ.9.5 ಕೋಟಿ, ಎಸ್‌ಎಫ್‌ಸಿ  ಮುಕ್ತ ನಿಧಿ ಅನುದಾನ-ರೂ.7.5 ಕೋಟಿ, ಮುಖ್ಯಮಂತ್ರಿಗಳ ಅಭಿವೃದ್ಧಿ ಅನು ದಾನ- ರೂ.7 ಕೋಟಿ,  13ನೇ ಹಣಕಾಸು ಅನುದಾನ- ರೂ. 3.97 ಕೋಟಿ, ಇತರೆ ಆಸ್ತಿಗಳ ಮಾರಾಟ ದಿಂದ-ಪ್ಲಾಟ್ ಮಾರಾಟ- ರೂ.5 ಲಕ್ಷ, ವಿದ್ಯುತ್ ಅನುದಾನ- ರೂ.6.60 ಕೋಟಿ, ಇತರೆ ಅನುದಾನ- ರೂ.1.40 ಕೋಟಿ, ಆಸ್ತಿ ತೆರಿಗೆ ಆದಾಯ- ರೂ.2.25ಕೋಟಿ, ಉಪ ಕರ ಆದಾಯ (ಶೇ.10)- ರೂ.5.40 ಲಕ್ಷ, ಆಸ್ತಿ ತೆರಿಗೆ ಮೇಲಿನ ದಂಡ- ರೂ.25 ಲಕ್ಷ , ಖಾತಾ ಬದಲಾವಣೆ ಮತ್ತು ಉತಾರ ಫೀ- ರೂ.3.50 ಲಕ್ಷ, ಜಾಹೀರಾತು ತೆರಿಗೆ- ರೂ.3 ಲಕ್ಷ, ಅಭಿವೃದ್ಧಿ ಹಣ- ರೂ.60 ಲಕ್ಷ, ಕಟ್ಟಡ ಪರವಾನಿಗೆ ಸಂಬಂಧಿಸಿದ ಆದಾಯ- ರೂ.4 ಲಕ್ಷ, ಬೆಟರಮೆಂಟ್ ಫೀ- ರೂ.2 ಲಕ್ಷ, ವ್ಯಾಪಾರ ಪರವಾನಿಗೆ ಶುಲ್ಕಗಳು (ಡಿ.ಓ.ಟಿ)- ರೂ.10 ಲಕ್ಷ, ಇತರೆ ಪರವಾನಿಗೆ ಶುಲ್ಕಗಳು- ರೂ.2.10 ಲಕ್ಷ, ಟೆಂಡರ್ ಫಾರ್ಮ್, ಅರ್ಜಿ ಫಾರ್ಮ್, ಗಿಡಗಳ ಲೀಲಾವು ಮತ್ತು ಅನುಪಯುಕ್ತ ದಾಸ್ತಾನುಗಳ ಮಾರಾಟ- ರೂ.15.75 ಲಕ್ಷ, ವಾಣಿಜ್ಯ ಮಳಿಗೆ ಮತ್ತು ಭೂ ಬಾಡಿಗೆಯಿಂದ ಬರುವ ಆದಾಯ- ರೂ.53.75 ಲಕ್ಷ, ಸ್ಟಾಂಪ್‌ಡ್ಯೂಟಿ- ರೂ.7.50ಲಕ್ಷ, ನೀರು ಸರಬರಾಜು ಮೂಲಗಳ ಆದಾಯ- ರೂ.1.15 ಕೋಟಿ, ಪ್ಲಂಬರ್ ಲೈಸೆನ್ಸ್ ಫೀ- ರೂ.50 ಸಾವಿರ, ಬ್ಯಾಂಕ್ ಖಾತೆಗಳಿಂದ ಬಡ್ಡಿ- ರೂ.12.15 ಲಕ್ಷ, ನೋಟಿಸ್ ಮತ್ತು ವಾರೆಂಟ್ ಫೀ- 500 ರೂ, ವಕಾರಸಾಲ ಬಾಡಿಗೆ- ರೂ. 2.50ಲಕ್ಷ, ದಂಡ,ಇತರೆ- ರೂ. 2.30 ಲಕ್ಷ, ರಸ್ತೆ ಅಗೆತದಿಂದ- ರೂ.3 ಲಕ್ಷ, ಜನನ/ಮರಣ ಉತಾರ ಫೀ- ರೂ. 2.50 ಲಕ್ಷ, ಕೊಳಚೆ ಪ್ರದೇಶ ಉಪಕರ- 30 ಸಾವಿರ ರೂಪಾಯಿ, ಮೈಲಾ ಸ್ವಚ್ಛ ಮಾಡುವ ಯಂತ್ರದಿಂದ- ರೂ.1.50 ಲಕ್ಷ, ಕಲ್ಯಾಣ ಮಂಟಪ, ಸಭಾ ಭವನಗಳಿಂದ ಬಾಡಿಗೆ- 50 ಸಾವಿರ ರೂಪಾಯಿ, ಸಾರ್ವಜನಿಕ ಶೌಚಾಲಯಗಳಿಂದ ಬಾಡಿಗೆ- 25 ಸಾವಿರ ರೂಪಾಯಿ, ಇತರೆ ಶುಲ್ಕಗಳು- 6.70 ಲಕ್ಷ, ಅಸಾಧಾರಣ ಸ್ವೀಕೃತಿಗಳು (ನೌಕರರ ವೇತನದಲ್ಲಿನ ಕಡತಗಳು, ಗುತ್ತಿಗೆದಾರರ ಕಡತಗಳು, ಎಸ್‌ಜೆಎಸ್‌ಆರ್‌ವೈ ಸ್ಕೀಮ್‌ಗಳು ಹಾಗೂ ಇತರೆ ನಗರಸಭೆಯ ಸ್ವೀಕೃತಿಗಳೆಂದು ಪರಿಗಣಿ ಸಲಾಗದ ಜಮೆಗಳು)- 10.63 ಕೋಟಿ ರೂಪಾಯಿ.

ಅಂದಾಜು ಖರ್ಚು: ಇದೇ ರೀತಿ 63,88,38,785 ರೂಪಾಯಿ ಅಂದಾಜು ಖರ್ಚು ಸಿದ್ಧಪಡಿಸಿದ್ದು, ಅದು ಈ ಕೆಳಕಂಡತೆ ಇದೆ.

ನೌಕರರ ವೇತನಕ್ಕಾಗಿ ಖರ್ಚು- ರೂ. 8.89ಕೋಟಿ, ನೌಕರರ ಅಂತರ ಬಾಕಿ ಖರ್ಚು- ರೂ. 65 ಲಕ್ಷ, ವಿದ್ಯುತ್ ಸುಡತಿ ಬಿಲ್- ರೂ. 6.60ಕೋಟಿ ಸೇರಿದಂತೆ ಅನೇಕ ಖರ್ಚು ವೆಚ್ಚಗಳನ್ನು ಸೇರಿಸಲಾಗಿದೆ.

ಬಂಡವಾಳ ಪಾವತಿಗಳು:  ಭೂಮಿ ಖರೀದಿಗಾಗಿ- ರೂ.10 ಲಕ್ಷ, ಕಟ್ಟಡ ಗಳ ನಿರ್ಮಾಣ- ರೂ.25 ಲಕ್ಷ, ಭೀಷ್ಮ ಕೆರೆ ಅಭಿವೃದ್ಧಿಗಾಗಿ- ರೂ.5 ಲಕ್ಷ, ಇತರೆ ಸ್ಥಿರಾಸ್ತಿಗಳು- ರೂ.5 ಲಕ್ಷ, ವಾಹನಗಳ ಖರೀದಿಗಾಗಿ- ರೂ.72 ಲಕ್ಷ, ಇತರೆ ಸ್ಥಿರಾಸ್ತಿಗಳು- ಮೂರ್ತಿ ಗಳ ಪ್ರತಿಷ್ಠಾಪನೆಗಾಗಿ, ಇತ್ಯಾದಿ- ರೂ. 20 ಲಕ್ಷ, ಸಾರ್ವಜನಿಕ ಶೌಚಾಲಯ ಗಳ ನಿರ್ಮಾಣಕ್ಕಾಗಿ-ರೂ. 30 ಲಕ್ಷ, ಕಂಪ್ಯೂಟರ್, ಮೈಕ್ ಸೆಟ್ ಇತರೆ ಖರೀದಿಗಾಗಿ- ರೂ.10 ಲಕ್ಷ, ಕಚೇರಿ ಪೀಠೋಪಕರಣಗಳಿಗಾಗಿ- ರೂ.30 ಲಕ್ಷ, ನಗರಸಭೆ ಹಿಂದಿನ ವರ್ಷದ ಬಜೆಟ್‌ನಲ್ಲಿ 13,40,96,426 ರೂಪಾಯಿ ಉಳಿದಿದ್ದು, ಈ ವರ್ಷದ ಅಂದಾಜು ಆದಾಯಕ್ಕೆ ಆ ಮೊತ್ತವನ್ನು ಸೇರಿಸಿದರೆ 65,81,56,926 ರೂಪಾಯಿ ಯಾಗುತ್ತದೆ.

ಉಪಾಧ್ಯಕ್ಷೆ ಖಮರ್ ಸುಲ್ತಾನ ಜೆ.ನಮಾಜಿ, ಪೌರಾಯುಕ್ತ            ಎನ್. ರೇಣುಕ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.