ADVERTISEMENT

ನೀರಿನ ಕೊರತೆಯಿಂದ ಒಣಗಿದ ಸಸಿಗಳು

​ಪ್ರಜಾವಾಣಿ ವಾರ್ತೆ
Published 5 ಮೇ 2018, 11:39 IST
Last Updated 5 ಮೇ 2018, 11:39 IST
ನರೇಗಲ್‌ ಸಮೀಪ ರಾಷ್ಷ್ರೀಯ ಹೆದ್ದಾರಿಯ ನಿಡಗುಂದಿ–ಸಂಕನೂರ ಕ್ರಾಸ್ ಮಾರ್ಗಮಧ್ಯ ಅರಣ್ಯ ಇಲಾಖೆಯಿಂದ ಈಚೆಗೆ ನೆಡಲಾದ ಸಸಿಗಳು ನೀರಿನ ಕೊರತೆಯಿಂದ ಒಣಗಿರುವುದು
ನರೇಗಲ್‌ ಸಮೀಪ ರಾಷ್ಷ್ರೀಯ ಹೆದ್ದಾರಿಯ ನಿಡಗುಂದಿ–ಸಂಕನೂರ ಕ್ರಾಸ್ ಮಾರ್ಗಮಧ್ಯ ಅರಣ್ಯ ಇಲಾಖೆಯಿಂದ ಈಚೆಗೆ ನೆಡಲಾದ ಸಸಿಗಳು ನೀರಿನ ಕೊರತೆಯಿಂದ ಒಣಗಿರುವುದು   

ನರೇಗಲ್: ರಾಷ್ಷ್ರೀಯ ಹೆದ್ದಾರಿಯ ನಿಡಗುಂದಿ–ಸಂಕನೂರ ಕ್ರಾಸ್ ಮಾರ್ಗಮಧ್ಯ ಅರಣ್ಯ ಇಲಾಖೆಯಿಂದ ರಸ್ತೆಯ ಎರಡು ಬದಿಗೆ ಸುಮಾರು 200ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಆದರೆ ನೀರಿನ ಕೊರತೆಯಿಂದ ಸಸಿಗಳು ಒಣಗುತ್ತಿವೆ.

ಅರಣ್ಯ ಇಲಾಖೆಯ ಸಿಬ್ಬಂದಿ ನೆಟ್ಟಿರುವ ಸಸಿಗಳಿಗೆ ನೀರಿನ ವ್ಯವಸ್ಥೆಯನ್ನು ಸರಿಯಾಗಿ ಮಾಡಿಲ್ಲ. ಸಸಿ ನೆಟ್ಟ ಮೇಲೆ ಯಾವಾಗಲಾದರೊಮ್ಮೆ ಬಂದು ಟ್ಯಾಂಕರ್ ಮೂಲಕ ನೀರು ಹಾಕುತ್ತಿದ್ದಾರೆ. ಸರಿಯಾಗಿ ಕಾಳಜಿ ಮಾಡುತ್ತಿಲ್ಲ. ಇದರಿಂದ ಸಸಿಗಳು ಒಣಗುತ್ತಿವೆ ಎಂದು ನಿಡಗುಂದಿ ಗ್ರಾಮದ ನಿವಾಸಿ ಶರಣಪ್ಪ ಇಟಗಿ ಹೇಳಿದರು.

ರಸ್ತೆ ಪಕ್ಕಕ್ಕೆ ಸಸಿಗಳನ್ನು ನೆಡಲು ಮುಂದಾಗಿರುವುದು ಸ್ವಾಗತಾರ್ಹ ಆದರೆ ಮಳೆಗಾಲದಲ್ಲಿ ಸಸಿಗಳನ್ನು ನೆಟ್ಟರೆ ನೀರಿನ ಸಮಸ್ಯೆ ಕಡಿಮೆ ಇರುತ್ತದೆ. ಈಗ ಬಿಸಿಲಿನ ಝಳ ಜಾಸ್ತಿಯಾಗಿರುವುದರಿಂದ ಈಚೆಗಷ್ಟೆ ನೆಟ್ಟ ಸಸಿಗಳಿಗೆ ನೀರುಣಿಸಲು ಇತರೆ ವ್ಯವಸ್ಥೆಯನ್ನು ಸಂಬಂಧಿತ ಇಲಾಖೆಯವರು ಮಾಡಿಕೊಂಡು ಸಸಿಗಳನ್ನು ಸಂರಕ್ಷಿಸಲು ಮುಂದಾಗಬೇಕು ಎಂದು ಗಜೇಂದ್ರಗಡ ಗ್ರೀನ್ ಆರ್ಮಿ ತಂಡದ ಸದಸ್ಯರಾದ ರಾಜು ಇಟಗಿ, ಕಿರಣಕುಮಾರ ತಳಕವಾಡ, ಸಂಗಮೇಶ ವಸ್ತ್ರದ, ಶಿವು ಕೊಸಗಿ, ಸಂಗಮೇಶ ಬಾಗೂರ ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.