ADVERTISEMENT

ಪಟ್ಟಣದಲ್ಲಿ ಬೃಹತ್‌ ಶಿವಲಿಂಗ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2017, 6:52 IST
Last Updated 11 ಅಕ್ಟೋಬರ್ 2017, 6:52 IST

ಲಕ್ಷ್ಮೇಶ್ವರ: ಇಲ್ಲಿನ ಪುರಾತನ ಮಹಂತಿನಮಠದ ಹತ್ತಿರ ನೀರಿನ ಪೈಪ್‌ಲೈನ್‌ ಅಳವಡಿಸಲು ಮಂಗಳವಾರ ಜೆಸಿಬಿ ಯಂತ್ರದಿಂದ ಮಣ್ಣು ಅಗೆಯುವ ಸಂದರ್ಭದಲ್ಲಿ 5 ಅಡಿ ಎತ್ತರದ ಬೃಹತ್ ಶಿವಲಿಂಗ ಪತ್ತೆಯಾಗಿದೆ.

ಗುಂಡಿ ತೋಡುತ್ತಿದ್ದಾಗ ಕಲ್ಲು ಬಡಿದ ಶಬ್ದ ಕೇಳಿಸಿದೆ. ಬಳಿಕ ಸುತ್ತಲಿನ ಮಣ್ಣು ತೆಗೆದಾಗ ಶಿವಲಿಂಗ ಪತ್ತೆಯಾಗಿದೆ.ಶಿವಲಿಂಗವನ್ನು ಹೊರತೆಗೆದು ಮಹಂತಿನ ಮಠದಲ್ಲಿರುವ ತೋಟಗಾರಿಕಾ ಇಲಾಖೆ ಆವರಣದಲ್ಲಿ ಇಡಲಾಗಿದೆ. ಶಿವಲಿಂಗ ಹಳೆಯದಾಗಿದ್ದರಿಂದ ಅಲ್ಲಲ್ಲಿ ಸ್ವಲ್ಪ ಹಾನಿಯಾಗಿದೆ. ಶಿವಲಿಂಗ ದೊರೆತ ಸುದ್ದಿ ತಿಳಿದು ಪಟ್ಟಣದ ಜನ ತಂಡೋಪತಂಡವಾಗಿ ಬಂದು ಅದನ್ನು ವೀಕ್ಷಿಸಿದರು.

ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳು ಶಿವಲಿಂಗವನ್ನು ಪರಿಶೀಲಿಸಿ ಅದರ ಕುರಿತು ಮಾಹಿತಿಯನ್ನು ಒದಗಿಸಬೇಕು ಎಂದು ರಾಘವೇಂದ್ರ ಪೂಜಾರ, ಕೃಷ್ಣಾ ತೊರಗಲ್, ರಂಗಣ್ಣ ಕೊಂಡಿಕೊಪ್ಪ, ಪಾಣಿಗಟ್ಟಿ, ಹನುಮಂತಪ್ಪ ದೊಡ್ಡಮನಿ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.